ಕುಂದಾಪುರ : ವಿಶ್ವ ರಾಮಕ್ಷತ್ರಿಯ ಮಹಾಸಂಘದ ಆಶ್ರಯದಲ್ಲಿ ರಾಮಕ್ಷತ್ರಿಯ ಸಮಾಜದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಗಾಗಿ ಇದೇ ತಿಂಗಳ ದಿನಾಂಕ 26ರಂದು ಆದಿತ್ಯವಾರ ನಡೆಯಲಿರುವ ಮಹಾ ಮೃತ್ಯುಂಜಯ ಹೋಮ ಮತ್ತು ಚಂಡಿಕಾ ಹೋಮ ಹಾಗೂ 108 ತೆಂಗಿನಕಾಯಿ ಗಣಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ನಿನ್ನೆ ಶುಕ್ರವಾರ ಹೊರೆಕಾಣಿಕೆಗೆ ಚಾಲನೆ ನೀಡಲಾಯಿತು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಎಚ್ ಆರ್ ಶಶಿಧರ ನಾಯ್ಕ್ ರವರು ಭಗವಾಧ್ವಜದ ಮೂಲಕ ಹೊರೆಕಾಣಿಕೆಗೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಕುಂದಾಪುರ ರಾಮಕ್ಷತ್ರಿಯರ ಸಂಘದ ಸದಸ್ಯರು ರಾಮಕ್ಷತ್ರಿಯ ಯುವಕ ಮಂಡಳಿಯ ಸದಸ್ಯರು ರಾಮಕ್ಷತ್ರಿಯ ಮಹಿಳಾಮಂಡಳಿಯ ಸದಸ್ಯೆಯರು ಹಾಗೂ ಸಮಾಜದ ಮುಖಂಡರಾದ ಶಂಕರ್ ಶೇರಗಾರ್ ಜಿ ಆರ್ ಪ್ರಕಾಶ್ ಡಿ ಸತೀಶ್ ಪ್ರಕಾಶ್ ಬೆಟ್ಟಿನ್ ಸುರೇಶ್ ಬೆಟ್ಟಿನ್ ಮಹೇಶ್ ಬೆಟ್ಟಿನ್ ಪಿ ದೇವಕಿ ಸಣ್ಣಯ್ಯ ಶಂಕರ್ ಅಶೋಕ್ ಬೆಟ್ಟಿನ್ ಹಾಗೂ ವೆಂಕಟೇಶ್ವರ ಸ್ವೀಟ್ಸ್ ಮಾಲಕರಾದ ಶೀಧರ್ ಪಿ ಎಸ್ ಉಪಸ್ಥಿತರಿದ್ದರು