Home » “SPACE–ON-WHEELS” ವಿಜ್ಞಾನ ವಸ್ತು ಪ್ರದರ್ಶನ
 

“SPACE–ON-WHEELS” ವಿಜ್ಞಾನ ವಸ್ತು ಪ್ರದರ್ಶನ

ಫೆ.25-26, ವಿಶ್ವ ವಿನಾಯಕ ಶಾಲೆ

by Kundapur Xpress
Spread the love

ತೆಕ್ಕಟ್ಟೆ : ವಿಶ್ವ ವಿನಾಯಕ ಸಿ. ಬಿ. ಎಸ್. ಇ. ಸ್ಕೂಲ್ ತೆಕ್ಕಟ್ಟೆ ಇಲ್ಲಿ ದಿನಾಂಕ 25 ಹಾಗೂ 26 ಫೆಬ್ರವರಿಯಂದು ISRO ಬೆಂಗಳೂರು ಪ್ರಾಯೋಜಿತ “SPACE–ON-WHEELS” ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ISRO ಸಂಸ್ಥೆಯ ವಿಜುವಲ್ ಡಾಕ್ಯೂಮೆಂಟೇಶನ್ ಮತ್ತು ಔಟ್ ರೀಚ್ ಘಟಕದ ಮುಖ್ಯಸ್ಥರಾದ P. V. N ಮೂರ್ತಿಯವರ ನೇತೃತ್ವದಲ್ಲಿ ಆಕಾಶಕಾಯಗಳ ಮಾಹಿತಿ ಯನ್ನೊಳಗೊಂಡ ಮಾದರಿಗಳ ಎರಡು ಬಸ್ಸುಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿ ಇಡಲಾಗುವುದು.

ಈ ಕಾರ್ಯಕ್ರಮಕ್ಕೆ ಕುಂದಾಪುರ ತಾಲೂಕು ಹಾಗೂ ಬ್ರಹ್ಮಾವರ ತಾಲೂಕಿನ 6 ನೇ ತರಗತಿಯಿಂದ 9ನೇ ತರಗತಿಯವರೆಗಿನ ಮಕ್ಕಳಿಗೆ ವೀಕ್ಷಣೆಗೆ ಮುಕ್ತ ಅವಕಾಶಕ್ಕಾಗಿ ಮಾನ್ಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರವಾನಿಗೆಯನ್ನು ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಲಘು ಉಪಹಾರ ಹಾಗೂ ವೈದ್ಯಕೀಯ ಸೇವೆಯ ಸೌಲಭ್ಯವನ್ನು ಒದಗಿಸಲಾಗುವುದು. ಸ್ಥಳೀಯ ಸರಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಕರೆತರಲು ನಮ್ಮ ಶಾಲೆಯಿಂದ ಬಸ್ತಿನ ವ್ಯವಸ್ಥೆಯನ್ನು ಮಾಡಿರುತ್ತೇವೆ

ಈ ವಿಜ್ಞಾನ ವಸ್ತು ಪ್ರದರ್ಶನವು ಫೆಬ್ರವರಿ 25ನೇ ತಾರೀಕು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಉದ್ಘಾಟನೆಗೊಳ್ಳಲಿರುವುದು. ಸಭಾ ಕಾರ್ಯಕ್ರಮದಲ್ಲಿ ಮಾನ್ಯ ಉಪ ನಿರ್ದೇಶಕರಾದ ಗಣಪತಿ ಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಶೆಟ್ಟಿ, ಇಸ್ರೋ ಸಂಸ್ಥೆಯ ಮುಖ್ಯಸ್ಥರಾದ ಪಿ. ವಿ. ಎನ್. ಮೂರ್ತಿ, ದುರ್ಗಾ ಪರಮೇಶ್ವರಿ ಎಜುಕೇಶನಲ್ ಟ್ರಸ್ಟ್, ಬೆಂಗಳೂರು ಇದರ ಚೇರ್ ಮೆನ್ ಡಾ. ಜಯರಾಮ್ ಶೆಟ್ಟಿ ಎಸ್., ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಬನಾ ಶೆಟ್ಟಿ ಯವರು ಉಪಸ್ಥಿತರಿರಲಿದ್ದಾರೆ.

ಈ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಿಗೆ ಆಕಾಶ ಕಾಯಗಳ ಮಾಹಿತಿಯೊಂದಿಗೆ, ಇಸ್ರೋ ಸಂಸ್ಥೆಯ ಕಾರ್ಯ ವೈಖರಿ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬಹಳ ಮಾರ್ಗದರ್ಶಿಯಾಗಲಿದೆ ಎಂದು ವಿಶ್ವವಿನಾಯಕ ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.

ಇದು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಸಾರ್ವಜನಿಕರಿಗೂ ವೀಕ್ಷಣೆಗೆ ಮುಕ್ತವಾಗಿರಲಿದೆ. ಫೆಬ್ರವರಿ 25 ರಂದು ಬೆಳಿಗ್ಗೆ 9:30 ರಿಂದ ಸಂಜೆ 4:00 ಗಂಟೆಯವರೆಗೆ ಹಾಗೂ ಫೆಬ್ರವರಿ 26 ರಂದು ಬೆಳಿಗ್ಗೆ 9:30 ರಿಂದ 12 ಗಂಟೆಯವರೆಗೆ ಈ ವಿಜ್ಞಾನ ವಸ್ತು ಪ್ರದರ್ಶನವು ನಡೆಯಲಿರುತ್ತದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಶ್ವ ವಿನಾಯಕ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ಇದರ ಆಡಳಿತ ನಿರ್ಧೇಶಕರಾದ ಎಂ ಪ್ರಭಾಕರ್‌ ಶೆಟ್ಟಿ ಹಾಗೂ ಪ್ರಾಂಶುಪಾಲರಾದ ನಿತಿನ್‌ ಅಲ್ಮೇಡಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ

 

Related Articles

error: Content is protected !!