Home » ರಾಮಮಂದಿರ ಬಗ್ಗೆ ಅವಹೇಳನ ಮಾಡಿದವನಿಗೆ 60 ದಿನ ಜೈಲುವಾಸ
 

ರಾಮಮಂದಿರ ಬಗ್ಗೆ ಅವಹೇಳನ ಮಾಡಿದವನಿಗೆ 60 ದಿನ ಜೈಲುವಾಸ

by Kundapur Xpress
Spread the love

ನರಗುಂದ : ರಾಮ ಮಂದಿರ ಭಾವಚಿತ್ರದ ಮೇಲೆ ಅವಹೇಳನಕಾರಿ ಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದವನಿಗೆ 60 ದಿನ ಸಾದಾ ಕಾರಾಗೃಹವಾಸ ಶಿಕ್ಷೆ ಹಾಗೂ 5,000 ದಂಡ ವಿಧಿಸಿ ನರಗುಂದ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಗದಗ ಜಿಲ್ಲೆ ನಗರಗುಂದ ನಿವಾಸಿ ಹಾಸಿಂಸಾಬ ಅಕ್ಷರಸಾಬ ಖಾಜಿ ಶಿಕ್ಷೆಗೊಳಗಾದ ಅಪರಾಧಿ. 2018 ಅ.26ರಂದು ರಾಮಮಂದಿರ ಚಿತ್ರದ ಮೇಲೆ ಹಿಂದಿ ಹಾಗೂ ಇಂಗ್ಲಿಷ್ ಅಕ್ಷರಗಳಲ್ಲಿ ಆಕ್ಷೇಪಾರ್ಹ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದ. ಈ ಬಗ್ಗೆ ಕಲಂ 295ರ ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಆಗಿತ್ತು. ವಾದ ವಿವಾದ ಆಲಿಸಿದ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ

 

Related Articles

error: Content is protected !!