ತೆಕ್ಕಟ್ಟೆ : ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇನ್ಸ್‍ಪೈಯರ್ ಸ್ಪರ್ಧೆಗಳಿಗೆ ಮಾದರಿಗಳನ್ನು ತಯಾರಿಸುವ ಕುರಿತು ತರಭೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್ ಮರಕಾಲರವರು ಮಕ್ಕಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ಇನ್ಸ್‍ಪೈಯರ್ ಅವಾರ್ಡ್ ಗಳಿಸಲು ತಯಾರಿಸ ಬಹುದಾದ ಮಾದರಿಗಳ ಕುರಿತು ಮಾಹಿತಿ ನೀಡಿದರು.
ದೈನಂದಿನ ಜೀವನದಲ್ಲಿ ಮಾಡುವ ವಿವಿಧ ಕೆಲಸ ಕಾರ್ಯಗಳನ್ನು ಸುಲಭದ ವಿಧಾನದಲ್ಲಿ ಮಾಡಲು ಸಹಕಾರಿಯಾಗುವ ಮಾದರಿಗಳನ್ನು ತಯಾರಿಸಿದಲ್ಲಿ ಅಂತಹ ಮಾದರಿಗಳು ಬಹುಮಾನ ಗಳಿಸಿ ಪ್ರೋತ್ಸಾಹ ಸಿಗುವುದಾಗಿ ತಿಳಿಸಿದರು. ವಿವಿಧ ವಿಜ್ಞಾನ ಮಾದರಿಗಳನ್ನು ಮಾಡುವ ಸರಳ ವಿಧಾನಗಳ ಕುರಿತು ಮಕ್ಕಳಿಗೆ ತಿಳಿಸಿದರು
ವಿದ್ಯಾಥಿಗಳಾದ ರಶ್ವತ್ ಸ್ವಾಗತಿಸಿ ಬಿಂದುಶ್ರೀ ವಂದಿಸಿದರು ಹಾಗೂ ಹರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.