ಕೋಟ: ಲೋಕಸಭೆಯ ವಿರೋಧ ಪಕ್ಷ ನಾಯಕರು ಲೋಕಸಭೆಯಲ್ಲಿಹಿಂದೂ ಸಮಾಜವನ್ನು ಅವಮಾನಿಸಿದ್ದು ಅವರ ಹೀನ ಸಂಸ್ಕ್ರತಿಯನ್ನು ತೋರ್ಪಡಿಸಿದೆ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಮಸ್ತ ಹಿಂದು ಸಮಾಜಕ್ಕೆ ಅಗೌರವವನ್ನು ತೋರಿದ್ದಾರೆ.ಇದು ಅವರ ಹೀನ ಮನಸ್ಥಿತಿಯನ್ನು ಮತ್ತೊಮ್ಮೆ ಸಾಕ್ಷೀಕರಿಸಿದೆ. ಕಾಂಗ್ರೆಸ್ನಲ್ಲಿರುವ ಹಿಂದೂಗಳು ಕಾಂಗ್ರೆಸ್ ಪಾರ್ಟಿ ನಡೆಯ ಬಗ್ಗೆ ಅವಲೋಕಿಸುವ ಅವಶ್ಯಕತೆ ಇದೆ. ಹಿಂದೂಗಳು ಕಾಂಗ್ರೆಸ್ ಪಾರ್ಟಿಯಲ್ಲಿ ಇರೋದು ತಪ್ಪಲ್ಲ ಪಾರ್ಟಿಯ ನಾಯಕರು ಇಂಥ ಅವಮಾನ ಮಾಡಿದಾಗ ಪ್ರತಿಕ್ರಿಯೆ ನೀಡುವುದು ಒಳಿತು ಇಂಥಹ ಬೇಜವಾಬ್ದಾರಿ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾದ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.