ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ಸರಕಾರಿ ಪ್ರೌಢಶಾಲೆ ಗುಂಡ್ಮಿಗೆ 50 ಲೀಟರ್ ಸಾಮರ್ಥ್ಯದ ಆಧುನಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು.
ಹಸ್ತಾಂತರ ಸಮಾರಂಭದಲ್ಲಿ 3182 ರೋಟರಿ ಜಿಲ್ಲೆಯ ವಲಯ 3ರ ಅಸಿಸ್ಟೆಂಟ್ ಗವರ್ನರ್ ರೊಟೇರಿಯನ್ ಆಲ್ವಿನ್ ಕ್ವಾಡ್ರಸ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷ ಅರವಿಂದ ಶರ್ಮ ವಹಿಸಿ ಶುದ್ಧವಾದ ನೀರನ್ನು ಕುಡಿಯುವ ಅವಶ್ಯಕತೆಯನ್ನು ಮಕ್ಕಳಿಗೆ ವಿವರಿಸುತ್ತಾ ನೀರಿನ ಘಟಕವನ್ನು ಶಾಲೆಯ ಮುಖ್ಯೋಪಾಧ್ಯಾಯ ಕೆ.ಸತೀಶ್ ಐತಾಳ್ ರವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ರಾಘವೇಂದ್ರ ಜಿ, ರಾಜಾರಾಮ್ ಐತಾಳ್, ಚಂದ್ರ ನಾಯರಿ , ಪಿ.ಚಂದ್ರಶೇಖರ ಹೊಳ್ಳ , ಯಶೋದ ಹೊಳ್ಳ ,ಲೀಲಾವತಿ ಪೂಜಾರಿ, ಸುಲತ ಹೆಗ್ಡೆ, ಗಣೇಶ್.ಜಿ , ಶ್ರೀಪತಿ ಅಧಿಕಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಕೆ ಸತೀಶ್ ಐತಾಳ್ ಸ್ವಾಗತಿಸಿದರು. ಕ್ಲಬ್‍ನ ಕಾರ್ಯದರ್ಶಿ ಕರುಣಾಕರ ಶೆಟ್ಟಿ ವಂದಿಸಿದರು. ಶಿಕ್ಷಕಿ ಹೆಲೆನ್ ಬಾಂಜ್ ಕಾರ್ಯಕ್ರಮ ನಿರೂಪಿಸಿದರು.