ಉಡುಪಿ : ಡಿಸೆಂಬರ್ 21 ಅನ್ನು ವಿಶ್ವಧ್ಯಾನ ದಿನವಾಗಿ ಘೋಷಿಸಲು ಯುಎನ್ ಜನರಲ್ ಅಸೆಂಬ್ಲಿಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಈ ಮೂಲಕ ಪ್ರತಿ ವರ್ಷ ಡಿಸೆಂಬರ್ 21ನ್ನು ವಿಶ್ವ ಧ್ಯಾನ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಪ್ರಯುಕ್ತ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠ, ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ವಿವಿಧ ಯೋಗ ಸಂಸ್ಥೆಗಳ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಡಿ.21 ರ ಬೆಳಿಗ್ಗೆ 5.15 ಕ್ಕೆ ಪ್ರಪ್ರಥಮ ವಿಶ್ವ ಧ್ಯಾನ ದಿನಾಚರಣೆಯನ್ನು ಶ್ರೀ ಸುಗುಣೇಂದ್ರ ತೀರ್ಥರು ದೀಪ ಪ್ರಜ್ವಲನೆ ಹಾಗೂ ಆಶೀರ್ವಚನದೊಂದಿಗೆ ಚಾಲನೆ ನೀಡಲಿದ್ದಾರೆ. ಪತಂಜಲಿಯ ಮಂಡಲ ಪ್ರಭಾರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಪತಂಜಲಿ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್ ಪ್ರಕಟಣೆಯಲ್ಲಿ’ ತಿಳಿಸಿದ್ದಾರೆ.