ಕೋಟ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಗ ಇಲಾಖೆ, ತಾಲೂಕು ಆಡಳಿತ ಮತ್ತು ರೋಟರಿ ಕ್ಲಬ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜೂ.೨೧ ಶುಕ್ರವಾರದಂದು ಗಿಳಿಯಾರ ಕುಶಾಲ್ ಹೆಗ್ಡೆ ರೋಟರಿ ಭವನ ಫೆರಿ ರಸ್ತೆ ಕುಂದಾಪುರ ಇಲ್ಲಿ ಅಂತಾರಾಷ್ಟಿçÃಯ ಯೋಗ ದಿನಾಚರಣೆ ಆಚರಿಸಲಾಯಿತು.
ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಕಾರ್ಯಕ್ರಮವನ್ನು ಉದ್ಘಾಟಿಸಿ ದೈನಂದಿನ ಬದುಕಿಗೆ ಯೋಗ ಅತೀ ಮುಖ್ಯ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢಗೊಳ್ಳಲು ಬದುಕಿಗೆ ಯೋಗ ಒಂದು ಹೊಸ ರೂಪ ನೀಡುತ್ತದೆ. ಪ್ರತಿಯೊಬ್ಬರು ಯೋಗಾಭ್ಯಾಸವನ್ನು ಬದುಕಿನ ಅವಿಭಾಜ್ಯ ಅಂಗವೆAದು ತಿಳಿದು ಮುಂದುವರೆಸಿಕೊAಡು ಹೋಗಬೇಕೆಂದರು.
ಸಭಾಧ್ಯಕ್ಷತೆಯನ್ನು ವಕೀಲ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ವಹಿಸಿ ಯೋಗ ಭಾರತದ ಕೊಡುಗೆಯಾಗಿ ಇಂದು ವಿಶ್ವದಾದ್ಯಂತ ಗುರುತಿಸಿಕೊಂಡಿದೆ ಏಕಾಗೃತೆಗಾಗಿ ಸಿಕೊಳ್ಳಬೇಕು ಯೋಗವನ್ನು ಮೈಗೂಡಿ ಎಂದರು. ಮುಖ್ಯ ಅಭ್ಯಾಗತರಾಗಿ ಕುಂದಾಪುರ ಸಹಾಯಕ ವಿಭಾಗಾಧಿಕಾರಿ ರಶ್ಮಿ ಎಸ್.ಆರ್ , ಜೆಎಮ್‌ಎಫ್‌ಸಿ ನ್ಯಾಯಾಧೀಶ ಸಂಯಮ , ಪ್ರಧಾನ ಸಿವಿಲ್ ಕಮಿಷನರ್ ರಾಜು.ಎನ್, ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ ಕಾರ್ಯದರ್ಶಿ ಮಂಜುಳಾ ಬಿ, ಕುಂದಾಪುರ ನ್ಯಾಯಾಲಯದ ನ್ಯಾಯಾಧೀಶೆಯರಾದ ಶ್ರುತಿಶ್ರೀ ಎಸ್, ರೋಹಿಣಿ ಡಿ. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಹಂದಟ್ಟು ಪ್ರಮೋದ್ ಹಂದೆ, ಕುಂದಾಪುರ ತಹಶಿಲ್ದಾರ ಶೋಭಾ ಲಕ್ಷಿ÷್ಮÃ, ಕುಂದಾಪುರ ಸಹಾಯಕ ಸರಕಾರಿ ಅಭಿಯೋಜಕರಾದ ಉದಯ್ ಕುಮಾರ್ ಬಿ.ಎ ಉಪಸ್ಥಿತರಿದ್ದರು.
ಪತಂಜಲಿ ಯೋಗ ಶಿಕ್ಷಣ ಕುಂದೇಶ್ವರ ಇದರ ಅಧ್ಯಕ್ಷ ವಿವೇಕ ಪೈ ಇವರು ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಯೋಗಗುರು ಗುರುದಾಸ್ ಸಹತರ ಬೇತುದಾರರಾಗಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಆಯೋಜನೆಯಲ್ಲಿ ನ್ಯಾಯಾಲಯದ ಸಿಬ್ಬಂದಿಗಳಾದ ಸುರೇಶ್ ಮತ್ತು ರಾಜೀವ ಸಹಕರಿಸಿದರು.
ವಕೀಲರ ಸಂಘದ ಅಧ್ಯಕ್ಷ ಹೆಚ್. ಪ್ರಮೋದ್ ಹಂದೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಿಳಿಯಾರ್ ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು