Home » ಯಕ್ಷಸೌರಭ ಪ್ರಶಸ್ತಿಗೆ ಪಟ್ಲ ಸತೀಶ್ ಶೆಟ್ಟಿ ,ಯಕ್ಷ ಸುರಭಿ ವಿಶೇಷ ಪುರಸ್ಕಾರಕ್ಕೆ ಆನಂದ್ ಸಿ ಕುಂದರ್ ಆಯ್ಕೆ
 

ಯಕ್ಷಸೌರಭ ಪ್ರಶಸ್ತಿಗೆ ಪಟ್ಲ ಸತೀಶ್ ಶೆಟ್ಟಿ ,ಯಕ್ಷ ಸುರಭಿ ವಿಶೇಷ ಪುರಸ್ಕಾರಕ್ಕೆ ಆನಂದ್ ಸಿ ಕುಂದರ್ ಆಯ್ಕೆ

by Kundapur Xpress
Spread the love

ಕೋಟ: ಕಳೆದ ಸಾಕಷ್ಟು ವರ್ಷಗಳಿಂದ ಹವ್ಯಾಸಿ ಯಕ್ಷ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿ ಅನೇಕ ಯಕ್ಷಕಲಾವಿದರನ್ನು ಸೃಷ್ಠಿಸಿದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾ ರಂಗ ಶ್ರೀ ಕ್ಷೇತ್ರ ಕೋಟ ಇದೀಗ ದಶಮಾನೋತ್ಸವ ಸಂಭ್ರಮದಲ್ಲಿದ್ದು ಇದೇ ಬರುವ ಎ.26 ರಂದು ಕೋಟದ ಹಿರೇ ಮಹಾಲಿಂಗೇಶ್ವರ ದೇಗುಲದ ವಠಾದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ದಶಮಾನೋತ್ಸವದ ಅಂಗವಾಗಿ ಪ್ರತಿಷ್ಠಿತ ಯಕ್ಷಸೌರಭ ಪ್ರಶಸ್ತಿಯನ್ನು ಪಟ್ಲ ಫೌಂಡೇಶನ್ ಪ್ರವರ್ತಕ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಇವರಿಗೆ ಪ್ರದಾನಿಸಲಿದ್ದು ,ಜಿಲ್ಲೆ ಪ್ರಸಿದ್ಧ ಉದ್ಯಮಿ ಕಲಾಕ್ಷೇತ್ರಕ್ಕೆ ತನ್ನದೆ ಆದ ಸಹಕಾರ ನೀಡುತ್ತಿರುವ ಕೋಟದ ಧರ್ಮರತ್ನಾಕರ ಸಮಾಜಸೇವಕ ಆನಂದ ಸಿ ಕುಂದರ್ ದಶಮಾನೋತ್ಸವ ಯಕ್ಷ ಸುರಭಿ ವಿಶೇಷ ಪುರಸ್ಕಾರ ನೀಡಲಿದೆ ಎಂದು ಯಕ್ಷ ಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

Related Articles

error: Content is protected !!