ಕುಂದಾಪುರ : ಇವತ್ತಿನ ದಿನಗಳಲ್ಲಿ ಚಿಕ್ಕ ಮೇಳವನ್ನು ಸತತವಾಗಿ 14 ವರ್ಷ ನಡೆಸುವದೆಂದರೆ ಅದೊಂದು ಸಾಹಸವೇ ಸರಿ. ಈ ವರ್ಷ ಇದ್ದ ಚಿಕ್ಕ ಮೇಳ ಬರುವ ವರ್ಷ ಇರುವುದಿಲ್ಲ. ಹಾಗಿರುವಾಗ ಆರ್ಥಿಕತೆಯ ಮುಖ ನೋಡದೆ ಕಲೆ ಮತ್ತು ಸೇವೆಯ ಮನೋಭಾವದಿಂದ ಮಳೆಗಾಲದಲ್ಲಿ ಮನೆ ಒಳಗೆ ಕಲಾ ದೇವಿಯ ಸಾಕ್ಷಾತ್ಕರಿಸುವ ಶ್ರದ್ಧಾಭಕ್ತಿ ಆರಾಧನ ಕಲೆಯನ್ನು ಕಳೆದ 14 ವರ್ಷಗಳಿಂದ ಮಾಡುತ್ತಾ ಬಂದವರು ತಿಮ್ಮಪ್ಪ ದೇವಾಡಿಗ ಹೇರಂಜಾಲು ಮತ್ತು ನಾಗರಾಜ ಭಟ್
ಶ್ರೀದೇವಿಯ ಹೆಸರಿನಲ್ಲಿ ಹೊರಟಿರುವ ಈ ಚಿಕ್ಕಮೇಳ ಮಳೆಗಾಲದಲ್ಲಿ ಕುಂದಾಪುರ ತಾಲೂಕಿನ ಪರಿಸರದಲ್ಲಿ ತಿರುಗಾಟ ಮಾಡುತ್ತಿದೆ. ಕುಂದಾಪುರ ಪೇಟೆ ಪರಿಸರ ಆನಗಳ್ಳಿ. ಮುದ್ದುಗುಡ್ಡೆ. ಹೇರಿಕುದ್ರು. ತಲ್ಲೂರು. ಉಪ್ಪಿನಕುದ್ರು. ಹೆಮ್ಮಾಡಿ ಹಾಗೂ ಇನ್ನಿತರ ಪರಿಸರದಲ್ಲಿ ಸೇವೆ ನೀಡುತ್ತಾರೆ ಮಳೆಗಾಲದಲ್ಲಿ ಮನೆಯಲ್ಲಿ ಕಲೆಯ ಆರಾಧನೆ ಮಾಡಿದರೆ ತಾಳ ಚಂಡೆ ಮದ್ದಲೆ ನೀನಾದ ಕುಣಿತ ಮಾಡಿದರೆ ಮನೆಗೊಂದು ಮಂಗಳಕರ. ಮತ್ತು ಮನೆಯಲ್ಲಿರುವ ಗ್ರಹ ದೋಷ ಕಷ್ಟ ನಷ್ಟಗಳು ದೂರವಾಗುವುದು ಎನ್ನುವುದು ಪುರಾಣದ ನಂಬಿಕೆ ಇದೆ
ಈ ಚಿಕ್ಕ ಮೇಳಕ್ಕೆ ಸೇವಾರ್ತಿಗಳಿಂದ ಮತ್ತು ಪ್ರೇಕ್ಷಕರಿಂದ ತುಂಬಾ ಬೇಡಿಕೆ ಇದೆ. ಈ ಮೇಳವನ್ನು ಕೆಲವೊಂದು ಭಕ್ತಾದಿಗಳು.ಒಂದು ವಾರದ ಮೊದಲೇ ಬುಕ್ಕಿಂಗ್ ಮಾಡಿಕೊಂಡು ತಮ್ಮ ಮನೆಗೆ ಸ್ವಾಗತಿಸುತ್ತಾರೆ. ಇಂಥ ಒಂದು ಚಿಕ್ಕಮೇಳ ನಮ್ಮ ಕುಂದಾಪುರ ತಾಲೂಕಿನ ಪರಿಸರದಲ್ಲಿ ಇರುವುದು ಕುಂದಾಪುರ ತಾಲೂಕಿನ ಎಲ್ಲಾ ಯಕ್ಷಗಾನ ಕಲಾಭಿಮಾನಿಗಳಿಗೂ ಹಾಗೂ ಪ್ರೇಕ್ಷಕರಿಗೂ ಸಂತೋಷದ ಸುದ್ದಿ.
ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಪ್ಪ ದೇವಾಡಿಗ. ಚಂಡೆ. ಶಂಕರ ಆಚಾರ್ಯ ಕೆಂಚನೂರು. ಮದ್ದಲೆ ಅಜಿತ್ ಕುಮಾರ್ ಹಟ್ಟಿಕುದ್ರು. ಮತ್ತು ವೇಷಧಾರಿಯಾಗಿ ಆವರ್ಸೆ ಜಯ ಕುಮಾರ್. ಮತ್ತು ಇವರೊಂದಿಗೆ ಸ್ತ್ರೀ ಪಾತ್ರಧಾರಿಯಾಗಿ ಮಾಧವ ನಾಗೂರು ವಿಶ್ವನಾಥ್ ಕಿರಾಡಿ ವಿನಯ ಹಟ್ಟಿ ಅಂಗಡಿ. ಮತ್ತು ಇವರ ಸಹಾಯಕ್ಕೆ ಪರಮೇಶ್ವರ ದೇವಾಡಿಗ ಇವರು ಸಹಕರಿಸುತ್ತಿದ್ದಾರೆ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಯಕ್ಷಗಾನ ಚಿಕ್ಕ ಮೇಳದ ಸೇವೆ ಅನನ್ಯವಾಗಿದೆ.
ವರದಿ :-ಈಶ್ವರ್ ಸಿ ನಾವುಂದ