208
ಕುಂದಾಪುರ : ಕುಂದಾಪುರದ ಯಕ್ಷಸೌರಭ ಪ್ರವಾಸಿ ಮೇಳ ಇವರು ಬಸ್ರೂರು ಕೋಟಿ ಚೆನ್ನಯ ಗರಡಿಮನೆಯ ವಾರ್ಷಿಕ ಯಕ್ಷೋತ್ಸವದಲ್ಲಿ ಗರಡಿ ಮನೆಯ ಮುಖ್ಶಸ್ಥರಾದ ಗೋಪಾಲ ಪೂಜಾರಿಯವರನ್ನು ಗಣ್ಶರ ಸಮ್ಮುಖದಲ್ಲಿ ಗೌರವಿಸಲಾಯಿತುˌ ಸಭೆಯಲ್ಲಿ ಕಾವ್ರಾಡಿ ಗ್ರಾಮ ಪಂಚಾಯತ್ ಅಧ್ಶಕ್ಷರಾದ ವಿಜಯ ಪುತ್ರನ್ˌಮುಂಬೈ ಉದ್ಶಮಿ ಕಂಡ್ಲೂರು ಚಂದ್ರ ಮೊಗವೀರˌಯಕ್ಷ ಕಲಾವಿದ ಕೋಟ ಸುರೇಶ್ ಬಂಗೇರ ಹಾಗೂ ಮೇಳದ ಸಂಚಾಲಕ ಮಹಮ್ಮದ್ ಗೌಸ್ ಕಾವ್ರಾಡಿ ಕಂಡ್ಲೂರುˌ ಭಾಗವತ ಚಂದ್ರಕಾಂತ್ ಮೂಡುಬೆಳ್ಳೆ ಉಪಸ್ಥಿತರಿದ್ದರುˌತದನಂತರ ಯಕ್ಷ ಸೌರಭ ಕಲಾವಿದರಿಂದ “ನಾಗಶ್ರೀ”ಯಕ್ಷಗಾನ ಪ್ರದರ್ಶನ ನೇರವೇರಿತು

