112
ಕುಂದಾಪುರ : ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಪ್ರಯುಕ್ತ ಉಪ್ಪಿನಕುದ್ರುವಿನ ಶ್ರೀ ಗಣೇಶ ಯಕ್ಷಗಾನ ಮಂಡಳಿ ವತಿಯಿಂದ ದೇವಸ್ಥಾನದ ಮುಂಭಾಗದ ರಂಗ ಮಂಟಪದಲ್ಲಿ ಯಕ್ಷಗಾನ ಹಾಗೂ ಸಮ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು
ವೇದಿಕೆಯಲ್ಲಿ ಯಕ್ಷಗುರು, ಶಿಕ್ಷಕ, ಕಲಾವಿದ ಶ್ರೀಪತಿ ನಾಯಕ್ ಅವರನ್ನು ದೇವಸ್ಥಾನದ ವತಿಯಿಂದ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತಸರರಾದ ರಾಧಾಕೃಷ್ಣ ಶೆಣೈ, ಜತೆ ಆಡಳಿತ ಮೊತ್ತೇಸರರಾದ ಜನಾರ್ದನ ಮಲ್ಯ, ತ್ರಿವಿಕ್ರಮ್ ಪೈ, ಉಡುಪಿ ರೋಬೋಸಾಫ್ಟ್ ಟೆಕ್ನಾಲಜಿಯ ಸಹಾಯಕ ಮುಖ್ಯ ಪ್ರಬಂಧಕ ರವಿರಾಜ್ ಶೆಟ್ಟಿ ಪುರೋಹಿತ ಪಾಂಡುರಂಗ ಭಟ್, ರಂಗಸ್ಥಳ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಉಡುಪ ನೇರಳಕಟ್ಟೆ ನಿವೃತ್ತ ಮುಖ್ಯ ಶಿಕ್ಷಕ ವಿಠಲ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮಹಿಷಮರ್ದಿನಿ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. ಶಿಕ್ಷಕ ವಸಂತರಾಜ್ ಶೆಟ್ಟಿ ವಂಡ್ಸೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು

