Home » ಅದ್ಭುತ ಪ್ರದರ್ಶನದ ಮೂಲಕ ಜನ ಮೆಚ್ಚುಗೆಗೆ ಪಾತ್ರವಾದ ಚಿಣ್ಣರ ಗಾನ ಸುಧೆ
 

ಅದ್ಭುತ ಪ್ರದರ್ಶನದ ಮೂಲಕ ಜನ ಮೆಚ್ಚುಗೆಗೆ ಪಾತ್ರವಾದ ಚಿಣ್ಣರ ಗಾನ ಸುಧೆ

: ತಾರಾನಾಥ ಹೊಳ್ಳ

by Kundapur Xpress
Spread the love

ಕೋಟ : ಗುರುಮುಖೇನವಾದ ನಿರಂತರ ಅಭ್ಯಾಸದಿಂದ ಶಿಷ್ಯರನ್ನನೇಕರಿಂದ ಎತ್ತರಕ್ಕೇರಿದ ಸಂಸ್ಥೆ ಯಶಸ್ವಿ ಕಲಾವೃಂದ. ಹಲವಾರು ಮಕ್ಕಳು ತೆಕ್ಕಟ್ಟೆ ಕೇಂದ್ರದಲ್ಲಿ ಕಲಿತು ರಂಗಕ್ಕಾಗಿ ಅವಕಾಶಕ್ಕೆ ಎದುರು ನೋಡುತ್ತಿರುವುದನ್ನು ಗಮನಿಸಿದ್ದೇನೆ. ಆಯ್ದ ಮಕ್ಕಳಿಗೆ ಅವಕಾಶ ಕೊಟ್ಟರೆ ಭವಿಷ್ಯಕ್ಕೆ ಕಲಾವಿದರನ್ನು ಪ್ರೋತ್ಸಾಹಿಸಿದ ಹಿರಿಮೆ ನಮ್ಮದಾಗುತ್ತದೆ. ಅದ್ಭುತ ಪ್ರದರ್ಶನದ ಮೂಲಕ ಜನ ಮೆಚ್ಚುಗೆಗೆ ಪಾತ್ರವಾದ ಚಿಣ್ಣರ ಗಾನ ಸುಧೆ ನೆರೆದ ಪ್ರೇಕ್ಷಕರನ್ನು ಮೂಕ ಪ್ರೇಕ್ಷಕರಾಗುವಂತೆ ಮಾಡಿತು ಎಂದು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳರು ಯುವ ಯಕ್ಷಮಕ್ಕಳನ್ನು ಅಭಿನಂದಿಸಿ ಮಾತನ್ನಾಡಿದರು.

ಅವರು ಇತ್ತೀಚಿಗೆ ಕಾರ್ಕಡ ತಾರಾನಾಥ ಹೊಳ್ಳರ ಮನೆಯಂಗಳದಿ ಪುತ್ರಿ ಭೂಮಿಕಾ ಇವರ ಆರತಕ್ಷತೆಯ ಅಂಗವಾಗಿ ವಿಶಿಷ್ಟ ರೀತಿಯ ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಹಿನ್ನಲ್ಲೆಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಸ್ಥೆಯ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮದಲ್ಲಿ ಮಾತನ್ನಾಡಿದರು.

ಇದೇ ವೇಳೆ ಆರತಕ್ಷತೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಹೊಸಬದುಕು ಆಶ್ರಮಕ್ಕೆ ಊಟದ ವ್ಯವಸ್ಥೆ,ಸ್ಥಳೀಯ ಕಾರ್ಕಡ ಶಾಲೆ ಹಾಗೂ ಅಂಗನವಾಡಿಗೆ ಸಿಹಿತಿಂಡಿ ಊಟೋಪಚಾರದ ವ್ಯಸ್ಥೆ ವಿಶೇಷವಾಗಿ ಗಮನ ಸೆಳೆಯಿತು.

ಭೂಮಿಕಾ, ಅನೂಪ್ ಜಿ. ರಾವ್, ಶ್ರೀಮತಿ ತಾರಾನಾಥ ಹೊಳ್ಳ, ಕಾರ್ಯದರ್ಶಿ ವೆಂಕಟೇಶ ವೈದ್ಯ, ರಾಘವೇಂದ್ರ ಹೆಗಡೆ ಯಲ್ಲಾಪುರ, ರಾಹುಲ್ ಕುಂದರ್ ಕೋಡಿ, ಪೂಜಾ ಆಚಾರ್, ಪಂಚಮಿ ವೈದ್ಯ, ಪವನ್ ಆಚಾರ್, ಹರ್ಷಿತಾ ಅಮೀನ್ ಉಪಸ್ಥಿತರಿದ್ದರು

 

Related Articles

error: Content is protected !!