Home ಕರಾವಳಿ ಸುದ್ದಿನೂತನ ನ್ಯಾಯಾಧೀಶರಿಗೆ ಸ್ವಾಗತ

ನೂತನ ನ್ಯಾಯಾಧೀಶರಿಗೆ ಸ್ವಾಗತ

by Kundapur Xpress

ಕುಂದಾಪುರ : ಕುಂದಾಪುರದ ಪ್ರಧಾನ ಸಿವಿಲ್‌ ಜಡ್ಜ್‌ ಮತ್ತು ಜೆ ಎಂ ಎಫ್‌ ಸಿ ನ್ಯಾಯಾಲಯಕ್ಕೆ ನೂತನ ನ್ಯಾಯಾಧೀಶರಾಗಿ ಆಗಮಿಸಿದ ಶ್ರೀಮತಿ ಶ್ರುತಿಶ್ರೀ ಎಸ್‌ ಇವರನ್ನು ಕುಂದಾಪುರ ಬಾರ್‌ ಅಸೋಸಿಯೇಷನ್‌ ಇದರ ವತಿಯಿಂದ ಸ್ವಾಗತಿಸಲಾಯಿತು 

ಕುಂದಾಪುರದ ವಕೀಲರ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಕುಂದಾಪುರ ಬಾರ್‌ ಅಸೋಸಿಯೇಷನ್‌ ನ ಅಧ್ಯಕ್ಷರಾದ ಬನ್ನಾಡಿ ಸೋಮನಾಥ್‌ ಹೆಗ್ಡೆಯವರು ನೂತನ  ನ್ಯಾಯಾಧೀಶರಿಗೆ ಪುಷ್ಪಗುಚ್ಚವನ್ನು ನೀಡುವ ಮೂಲಕ ಸ್ವಾಗತಿಸಿದರು

ಈ ಸಮಾರಂಭದಲ್ಲಿ ಕುಂದಾಪುರದ ಹೆಚ್ಚುವರಿ ಜಿಲ್ಲಾ & ಸತ್ರ  ನ್ಯಾಯಾಧೀಶರಾದ  ಶ್ರೀ ಅಬ್ದುಲ್ ಹುಸೇನ್ ರಹೀಮ್ ಶೇಖ್ ಕುಂದಾಪುರ  ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು ಎನ್ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಶ್ರೀಮತಿ ರೋಹಿಣಿ ಡಿ ಹಾಗೂ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಜೊಸೆಫ್ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ಜತೆ ಕಾರ್ಯದರ್ಶಿ ರಿತೇಶ್ ಬಿ ಉಪಸ್ಥಿತರಿದ್ದರು.

ಸರಕಾರಿ ಸಹಾಯಕ ಅಭಿಯೋಜಕರಾದ ಶ್ರೀಮತಿ ಉಮಾ ನಾಯ್ಕ್ ಶ್ರೀಮತಿ ಅಮ್ರೀನ್ ಸುಹಾನ್ ಹಾಗೂ ಹಿರಿಯ ,ಕಿರಿಯ ಹಾಗೂ ಮಹಿಳಾ ವಕೀಲರುಗಳು ಹಾಜರಿದ್ದರು ವಕೀಲರಾದ ಮಂಜುನಾಥ್ ಅರಾಟೆ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾಗರಾಜ್ ರಾವ್ ಪ್ರಾರ್ಥಿಸಿದರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ  ಜೆ. ಶ್ರೀನಾಥ್ ರಾವ್ ಧನ್ಯವಾದವಿತ್ತರು

Related Articles