ಕೋಟ: ಯಕ್ಷಗಾನವು ಅಲ್ಲಲ್ಲಿ ಕಲಿಕಾ ಕೇಂದ್ರಗಳ ಮೂಲಕ ಪ್ರಬುದ್ಧತೆ ಹೊಂದುತ್ತಿದೆ. ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ತೆಕ್ಕಟ್ಟೆ ಹಯಗ್ರೀವವನ್ನು ಕೇಂದ್ರವಾಗಿರಿಸಿಕೊಂಡು ಕಳೆದ ಹಲವು ವರ್ಷಗಳಿಂದ ಬಡಗು ಯಕ್ಷಗಾನದ ಭಾಗವತಿಗೆ, ಚಂಡೆ, ಮದ್ದಳೆ, ಹೆಜ್ಜೆಗಳನ್ನು ಕಲಿಸುತ್ತಾ ಪ್ರತೀ ವರ್ಷ ಒಂದಷ್ಟು ಕಲಾವಿದರನ್ನು ರಂಗಕ್ಕೆ ಸಿದ್ಧಗೊಳಿಸಿ, ಕೊಡುಗೆಯಾಗಿಸಿ ಹೆಸರು ಮಾಡಿದೆ. 2024ನೇ ಸಾಲಿನ ಜೂನ್ 1ರಿಂದ ಆರು ತಿಂಗಳುಗಳ ಕಾಲದ ಕಲಿಕೆಗೆ ಮತ್ತೆ ತೆಕ್ಕಟ್ಟೆ ಹಯಗ್ರೀವ ತೆರೆದುಕೊಳ್ಳುತ್ತಿದೆ. ಪ್ರತೀ ದಿನ ಮಧ್ಯಾಹ್ನ ಗಂಟೆ 3ರಿಂದ ಆರಂಭವಾಗುವ ತರಗತಿಗೆ ಪ್ರಾಚಾರ್ಯ ಕೆ.ಪಿ. ಹೆಗಡೆ, ದೇವದಾಸ್ ರಾವ್ ಕೂಡ್ಲಿ, ಲಂಬೋದರ ಹೆಗಡೆ ನಿಟ್ಟೂರು ತೆಕ್ಕಟ್ಟೆ ಕಲಿಕಾ ಕೇಂದ್ರದಲ್ಲಿ ಗುರುಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ತರಗತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೋಟ ಸುದರ್ಶನ ಉರಾಳ, ಯಕ್ಷ ಸಂಘಟಕ, ಕಲಾವಿದ ಮಹಮದ್ ಗೌಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತರಗತಿಗೆ ಸೇರಲು ಬಯಸುವವರು 9945947771, ಸಂಪರ್ಕಿಸಬಹುದು ಎಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.