ಶಂಕರನಾರಾಯಣ : ಯುವ ಬಂಟರ ವೇದಿಕೆ ಶಂಕರನಾರಾಯಣ ಇದರ ವತಿಯಿಂದ ಶಂಕರನಾರಾಯಣ ಜಾತ್ರೆಯ ಪ್ರಯುಕ್ತ ಸಾoಪ್ರದಾಯಿಕ ಬಣ್ಣದೋಕುಳಿ ಕಾರ್ಯಕ್ರಮವು ಶಂಕರನಾರಾಯಣ ದೇವಸ್ಥಾನದ ರಥಬೀದಿಯಲ್ಲಿ ನೆರವೇರಿತು, ಮಾಜಿ ಸಚಿವರಾದ ಶ್ರೀ ಕೆ ಜಯಪ್ರಕಾಶ್ ಹೆಗ್ಡೆ ಮುಖ್ಯ ಅತಿಥಿ ನೆಲೆಯಲ್ಲಿ ಉಪಸ್ಥಿತರಿದ್ದು ಯುವ ಬಂಟರ ವೇದಿಕೆಯು ಹಲವಾರು ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಓಕುಳಿ ಸಂಪ್ರದಾಯವನ್ನು ನಡೆಸುತ್ತಾ ಬಂದಿದ್ದು ಯುವ ತಂಡದ ಕಾರ್ಯವನ್ನು ಶ್ಲಾಘಿಸಿದರು, ಶಂಕರನಾರಾಯಣ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸಸರರಾದ ಶ್ರೀ ಲಕ್ಷ್ಮೀ ನಾರಾಯಣ ಉಡುಪ ಶುಭಾಶoಸನೆಗೈದರು, ಕಾರ್ಯಕ್ರಮದಲ್ಲಿ ಉದ್ಯಮಿ ರೋಹಿತ್ ಕುಮಾರ್ ಶೆಟ್ಟಿ, ಉಳ್ಳೂರು ಶ್ರೀ ಬನಶಂಕರಿ ದೇವಸ್ಥಾನದ ಮೊಕ್ತೇಸರರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜೀವ ಶೆಟ್ಟಿ ಶಾಡಿಗುಂಡಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಸದಾಶಿವ ಶೆಟ್ಟಿ, ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಕಲ್ಗದ್ದೆ, ಮಂಗಳೂರು ಕೆ ಎಂ ಎಫ್ ನಿರ್ದೇಶಕರಾದ ಮಮತಾ ಆರ್ ಶೆಟ್ಟಿ, ಉಪಸ್ಥಿತರಿದ್ದರು,ಉಮೇಶ್ ಶೆಟ್ಟಿ ಕಲ್ಗದ್ದೆ ಪ್ರಸ್ತಾವಿಕ ಮಾತನಾಡಿದರು, ಕಿರಣ್ ಶೆಟ್ಟಿ ಶಾಡಿಗುಂಡಿ ಸ್ವಾಗತಿಸಿದರು, ಹೆಬ್ಬಾಡಿ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸುದೀಪ್ ಶೆಟ್ಟಿ ಹೆಬ್ಬಾಡಿ ವಂದಿಸಿದರು, ಸಭಾ ಕಾರ್ಯಕ್ರಮದ ನಂತರ ಮನೋರಂಜನ ಕಾರ್ಯಕ್ರಮದ ಅಂಗವಾಗಿ ಕನ್ನಡ ಚಿತ್ರ ರಂಗ ಮತ್ತು ವಿವಿಧ ವಾಹಿನಿಗಳ ಕರಾವಳಿಯ ಪ್ರಸಿದ್ಧ ಹಾಸ್ಯ ನಟರಾದ ದೀಪಕ್ ರೈ ಮತ್ತು ತಂಡದವರಿಂದ ಹಾಸ್ಯ ರಸ ಸಂಜೆ ಹಾಗು ಹೆಜ್ಜೆ ಗೆಜ್ಜೆ ಸಂಸ್ಥೆಯ ದೀಕ್ಷಾರಾಮಕೃಷ್ಣ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನೆರವೇರಿತು,

