ಕುಂದಾಪುರ : ಕುಂದಾಪುರದ ಪಡುಕೇರಿಯ ಯುವ ಮಿತ್ರ ವೃಂದದ ವಾರ್ಷಿಕ ಮಹಾ ಸಭೆಯು ಜರುಗಿತು. ಸಭೆಯ ಅಂಗವಾಗಿ ಯುವ ಮಿತ್ರ ವತಿಯಿಂದ ಸಮಾಜ ಸೇವಕ ಶ್ರೀ ಸೂರಿ ಅವರ ಮೋಕ್ಷ ಸಂಸ್ಥೆಗೆ ಆರೋಗ್ಯ ಕ್ಷೇತ್ರದ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸುಮಾರು 50 ಸಾವಿರ ವೆಚ್ಚದ ಆಮ್ಲಜನಕ ಉಪಕರಣವನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಯುವ ಮಿತ್ರ ವೃಂದದ ಅಧ್ಯಕ್ಷರಾದ ಶ್ರೀ ಅಮರ್ ಕುಮಾರ್ ರವರು ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀ ಚಿಕ್ಕಮ್ಮದೇವಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾಗರಾಜ ಕಾಮಧೇನುರವರು, ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ ಕೇಶವ ರವರು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಅಮರ್ ಕುಮಾರ್ ರವರು ಮಾತನಾಡಿ, 2024-2025 ನೇ ಸಾಲಿನಲ್ಲಿ ಯುವ ಮಿತ್ರ ವೃಂದದ ವತಿಯಿಂದ ಸಾಮಾಜಿಕ ಕಳಕಳಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲಾ, ಸದಸ್ಯರಿಗೂ, ಪಧಾಧಿಕಾರಿಗಳಿಗೂ ಮತ್ತು ಪಡುಕೇರಿ ಗ್ರಾಮಸ್ಥರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು.
ಶ್ರೀ ಚಿಕ್ಕಮ್ಮ ದೇವಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾಗರಾಜ ಕಾಮಧೇನುರವರು ಮಾತನಾಡಿ 2024-2025ನೇ ಸಾಲಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು.
ಲೆಕ್ಕ ಪರಿಶೋಧಕರಾದ ಶ್ರೀ ಕಿರಣ್ ಕುಮಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ವಿನೂತನ ಕಾರ್ಯಕ್ರಮಗಳಿಗೆ ಒಲವು ತೋರಿಸಲು ಯುವ ಪೀಳಿಗೆಗೆ ಕರೆ ನೀಡಿದರು.

