92
ಕುಂದಾಪುರ : ಇಲ್ಲಿನ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇಪದೇ ದನ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತ ಆರೋಪಿಗಳನ್ನು ಉಡುಪಿ ತಾಲೂಕಿನ ಸಾಸ್ತಾನದ ಮೊಹಮ್ಮದ ಕೈಪ್ ಮತ್ತು ಕಾಪು ತಾಲೂಕಿನ ಉಚ್ಚಿಲದ ಮೊಹಮ್ಮದ ಸುಹೇಲ್ ಖಾದರ್‌ಎಂದು ಗುರುತಿಸಲಾಗಿದೆ. ಅವರಿಂದ ದನಗಳನ್ನು ಕಳವು ಮಾಡಿ ಸಾಗಾಟ ಮಾಡಿದ 3 ಕಾರಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮತ್ತು ಈ ಕಾರಿನಲ್ಲಿ ಸಾಗಾಟ ಮಾಡಿದ 4 ದನಗಳನ್ನು ರಕ್ಷಿಸಿ ಗೋಶಾಲೆ ಬಿಡಲಾಗಿದೆ
ಇಲ್ಲಿ ಹೆಚ್ಚುತ್ತಿದ್ದ ಗೋಕಳ್ಳತನವನ್ನು ತಡೆಯಲು ಉಡುಪಿ ಎಸ್ಪಿ ಹರಿರಾಮ್ ಶಂಕರ ಅವರ ಮಾರ್ಗದರ್ಶನದಲ್ಲಿ, ಕುಂದಾಪುರ ಎಚ್.ಡಿ.ಕುಲಕರ್ಣಿ ಬೈಂದೂರು ಅವರು ವೃತ್ತ ನಿರೀಕ್ಷಕ ಸವೀತ್ರತೇಜ್ ನೇತೃತ್ವದಲ್ಲಿ ತನಿಖೆ ಮತ್ತು ಪತ್ತೆಗೆ 3 ತಂಡಗಳಾಗಿ ನೇಮಕ ಮಾಡಲಾಗಿತ್ತು.

