Home » ಸ್ಕೂಟರಿಗೆ ಬಸ್‌ ಡಿಕ್ಕಿ : ಮಹಿಳೆ ಸಾವು
 

ಸ್ಕೂಟರಿಗೆ ಬಸ್‌ ಡಿಕ್ಕಿ : ಮಹಿಳೆ ಸಾವು

by Kundapur Xpress
Spread the love

ಕುಂದಾಪುರ : ಸ್ಕೂಟರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನ ಹಿಂಬದಿ ಸವಾರೆ ಕುಂದಾಪುರ ತಾಲೂಕಿನ ಕೊರ್ಗಿ ಎಂಬಲ್ಲಿನ ನಿವಾಸಿ ಜಲಜಾ (64) ಮೃತಪಟ್ಟ ಘಟನೆ ಕುಂದಾಪುರದ ಸಂತೆ ಮಾರ್ಕೇಟ್ ಸಮೀಪ ರಾ.ಹೆ.66ರಲ್ಲಿ ಭಟ್ರಹಾಡಿ ಕ್ರಾಸ್ ಸಮೀಪ  ನಡೆದಿದೆ.

ಕೊರ್ಗಿ ನಿವಾಸಿ ಮಂಜ ಅವರು ಪತ್ನಿ ಜಲಜಾ ಅವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಆನಗಳ್ಳಿಯಿಂದ ರಾ.ಹೆ.66ರಲ್ಲಿ ಕೊರ್ಗಿಗೆ ಬರುತ್ತಿದ್ದ ಸಂದರ್ಭದಲ್ಲಿ ಕುಂದಾಪುರದ ಸಂತೆ ಮಾರ್ಕೇಟ್ ಸಮೀಪ ಭಟ್ರಹಾಡಿ ಎಂಬಲ್ಲಿ ಭಟ್ಕಳದಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಜಲಜಾ ಅವರು ರಸ್ತೆಗೆ ಬಿದ್ದಿದ್ದು, ಬಸ್ಸಿನ ಹಿಂಬದಿ ಚಕ್ರ ಅವರ ತಲೆ ಮೇಲೆ ಹತ್ತಿ ಹೋಗಿದೆ. ಅಪಘಾತದಲ್ಲಿ ಜಲಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!