Home » ಟೆಂಪೋ-ಬೈಕ್‌  ಡಿಕ್ಕಿ
 

ಟೆಂಪೋ-ಬೈಕ್‌  ಡಿಕ್ಕಿ

ವ್ಯಕ್ತಿ  ಸಾವು

by Kundapur Xpress
Spread the love

ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ಟೆಂಪೋ ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ. ಮಿಯ್ಯಾರು ನಿವಾಸಿ ಕಾಶಿನಾಥ್ (38) ಎಂಬವರೇ ಮೃತಪಟ್ಟವರು. ಅವರು  ರಾತ್ರಿ 9.00 ಗಂಟೆಯ ವೇಳೆಗೆ ಹಾಳೆಕಟ್ಟೆಯಲ್ಲಿರುವ ತಮ್ಮ ಸಲೂನ್ ಅಂಗಡಿ ಮುಚ್ಚಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಲ್ಲೂರು ಬಸದಿ ಬಳಿ ತಿರುವಿನಲ್ಲಿ ಬೈಕ್ ತಿರುಗಿಸಿದಾಗ ಎದುರಿನಿಂದ ಬಂದ ಟೆಂಪೊ ಡಿಕ್ಕಿ ಹೊಡೆದಿದೆ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!