145
ಕುಂದಾಪುರ : ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಟ್ ಬೇಲ್ಲೂರು ಗ್ರಾಮದ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ಬಳಿ ನಡೆದಿದೆ. ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಪಂಚಗಂಗಾ ಎಕ್ಸ್ ಪ್ರೆಸ್ ರೈಲು ಕೆಟ್ ಬೇಲ್ಲೂರು ಗ್ರಾಮದ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ಬಳಿ ರೈಲ್ವೇ ಟ್ಯಾಕ್‌ನಲ್ಲಿ ಸುಮಾರು 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

