131
ಕುಂದಾಪುರ : ಬ್ರಹ್ಮಾವರ ಬಳಿಯ ರಾಷ್ಟ್ರೀಯ ಹೆದ್ದಾರಿಯ ಹೇರೂರು ತಿರುವಿನಲ್ಲಿ ಕಾರು-ಸ್ಕೂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಿಲ್ಲೆಯ ಹಿರಿಯ ಪತ್ರಿಕಾ ವಿತರಕ ಹಾಗೂ ಭಜನಾ ಸಾಧಕ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಶೆಟ್ಟಿಯವರು ಮೃತಪಟ್ಟಿದ್ದಾರೆ ಪೇತ್ರಿಯ ನೈಜಿನಬೈಲು ನಿವಾಸಿಯಾದ ಅವರು ಮುಂಜಾನೆ ವೃತ್ತಿ ನಿರತರಾಗಿದ್ದ ಸಂದರ್ಭ ದಲ್ಲಿ ಈ ಘಟನೆ ನಡೆದಿದೆ ಅವರಿಗೆ ಪತ್ನಿ, ನಾಲ್ವರು ಪುತ್ರರು ಇದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

