Home » ನಿಂತಿದ್ದ ಲಾರಿಗೆ ಬಸ್ ಗುದ್ದಿ 2 ಸಾವು
 

ನಿಂತಿದ್ದ ಲಾರಿಗೆ ಬಸ್ ಗುದ್ದಿ 2 ಸಾವು

by Kundapur Xpress
Spread the love

ಶಿವಮೊಗ್ಗ : ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ಅಗ್ರಹಾರ ಬಳಿ ಸಂಭವಿಸಿದೆ.

ಹೊಸನಗರ ತಾಲೂಕಿನ ನಿವಾಸಿ, ಬಸ್ ಕಂಡಕ್ಟರ್‌ ಅಣ್ಣಪ್ಪ (40 ವರ್ಷ), ಚಳ್ಳಕೆರೆ ನಿವಾಸಿ ಹರ್ಷಿತ್ (35 ವರ್ಷ) ಮೃತರು. ಮಂಗಳೂರಿನಿಂದ ಚಳ್ಳಕೆರೆಗೆ ಹೋಗುವ ದುರ್ಗಾಂಬಾ ಬಸ್‌ಗೆ ಗಾಜನೂರಿನ ಬಳಿ ಎದುರಿಗೆ ಬಂದ ವಾಹನದ ಹೆಡ್‌ಲೈಟ್ ರಿಪ್ಲೆಕ್ಷನ್ ಆದ ಕಾರಣ ಬಸ್ಸನ್ನು ಎಡಕ್ಕೆ ಎಳೆದಿದ್ದು, ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!