ಕೋಟ: ಕೋಟ ಠಾಣಾ ವ್ಯಾಪ್ತಿಯ ಸೈಬ್ರಕಟ್ಟೆ ಜಂಕ್ಷನ್ ರಸ್ತೆಯ ಬದಿಯಲ್ಲಿ ನಿಂತಿದ್ದ ಕೃಷ್ಣದೇವಾಡಿಗ (82ವರ್ಷ) ಎಂಬುವವರಿಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದ ಪ್ರತ್ವೀಶ್ ಎಂಬುವರು ಡಿಕ್ಕಿ ಹೊಡೆದ ಪರಿಣಾಮ ಕೃಷ್ಣದೇವಾಡಿಗರ ತಲೆ ಹಾಗೂ ಕೈ ಕಾಲುಗಳಿಗೆ ತೀರ್ವ ತರಹದ ಪೆಟ್ಟಾಗಿದ್ದು ತಕ್ಷಣವೇ ಬ್ರಹ್ಮಾವರದ ಮಹೇಶ ಆಸ್ಪತ್ರೆಗೆ ದಾಖಾಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಗೆ ದಾಖಾಲಿಸಲಾಗಿದೆ ಬೈಕ್ ಸವಾರನಾದ ಪ್ರತ್ವೀಶ್ ಕೋಟೇಶ್ವರದ ಡಾ.ಎನ್.ಆರ್.ಆಚಾರ್ಯ ಆಸ್ಪತ್ರೆಗೆ ದಾಖಾಲಾಗಿದ್ದು .ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.