282
ಅಪರಿಚಿತ ವಾಹನ ಢಿಕ್ಕಿ ಯುವಕ ಮೃತ್ಯು
ಕುಂದಾಪುರ : ಅಪರಿಚಿತ ವಾಹನ ಢಿಕ್ಕಿ ಹೊಡೆದು ಯುವಕನೊರ್ವ ಸಾವನ್ನಪ್ಪಿರುವ ಘಟನೆ ಕೋಟಾದ ಕಾವಡಿ ಎಂಬಲ್ಲಿ ನಡೆದಿದೆ ಬಾರ್ಕೂರು ಬಳಿಯ ಹೇರಾಡಿ ನಿವಾಸಿಯಾದ ನಾಗೇಶ್ ಆಚಾರ್ಯ ಮೃತ ದುರ್ದೈವಿ
32 ವರ್ಷ ಪ್ರಾಯದ ಅವರು ಕೋಟಾ ಸಮೀಪದ ಗೇರುಬೀಜ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕನಾಗಿ ಕೆಲಸ ನಿರ್ವಹಿಸುತ್ತಿದ್ದು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಾಸಾಗುವ ವೇಳೆ ಯಾವುದೊ ಅಪರಿಚಿತ ವಾಹನ ಢಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದುಕೊಂಡಿದ್ದರು ಸ್ವಲ್ಪ ಹೊತ್ತಿನ ಬಳಿಕ ಅದೇ ದಾರಿಯಲ್ಲಿ ಬಂದ ಪರಿಚಯಸ್ಥರು ಗಮನಿಸಿ ತಕ್ಷಣ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ಪರೀಕ್ಷಿಸಿದ ವೈದ್ಯರು ನಾಗೇಶ್ ಆಚಾರ್ಯ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಘಟನೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

