Home » ಬಸ್‌ ಬೈಕ್‌ ಮುಖಾಮುಖಿ ಡಿಕ್ಕಿ : ಹೊತ್ತಿ ಉರಿದ ಬೈಕ್‌ , ಸವಾರ ಸ್ಥಳದಲ್ಲೇ ಸಾವು
 

ಬಸ್‌ ಬೈಕ್‌ ಮುಖಾಮುಖಿ ಡಿಕ್ಕಿ : ಹೊತ್ತಿ ಉರಿದ ಬೈಕ್‌ , ಸವಾರ ಸ್ಥಳದಲ್ಲೇ ಸಾವು

by Kundapur Xpress
Spread the love

ಕುಂದಾಪುರ : ಬಸ್‌ ಹಾಗೂ ಬೈಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ಕೊಲ್ಲೂರು ಮುಖ್ಯ ರಸ್ತೆಯ ಕೆಂಚನೂರು ಸಮೀಪದ ಮಲ್ಲಾರಿ ತಿರುವಿನಲ್ಲಿ ನಡೆದಿದೆ.

ಮೃತ ಯುವಕನನ್ನು ಸಿಗಂಧೂರು ನಿವಾಸಿ ಶರತ್ (25) ಎಂದು ಗುರುತಿಸಲಾಗಿದೆ. ಹೆಮ್ಮಾಡಿಯಿಂದ ಕೊಲ್ಲೂರಿನತ್ತ ತೆರಳುತ್ತಿರುವ ಖಾಸಗಿ ಬಸ್‌ಗೆ ಕೊಲ್ಲೂರಿನಿಂದ ಕುಂದಾಪುರದತ್ತ ಶರವೇಗದಲ್ಲಿ ತೆರಳುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದ್ದು, ಸವಾರ ಶರತ್ ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  ಬೈಕ್‌ಗೆ ಬೆಂಕಿ ತಗುಲಿ ಹೊತ್ತಿ ಉರಿದು ಸುಟ್ಟು ಕರಕಲಾಗಿದೆ.

ಶಂಕರನಾರಾಯಣ ಠಾಣೆಯ ವೃತ್ತನಿರೀಕ್ಷಕ ಜಯರಾಮ್ ಡಿ. ಗೌಡ, ಕುಂದಾಪುರ ಸಂಚಾರಿ ಠಾಣೆಯ ಪಿಎಸ್‌ಐ ಪ್ರಸಾದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ

 

Related Articles

error: Content is protected !!