Home » ರಸ್ತೆ ಅಪಘಾತ : ಯಕ್ಷಗಾನ ಕಲಾವಿದ ಸಾವು
 

ರಸ್ತೆ ಅಪಘಾತ : ಯಕ್ಷಗಾನ ಕಲಾವಿದ ಸಾವು

by Kundapur Xpress
Spread the love

ಕುಂದಾಪುರ:  ರಸ್ತೆಗೆ ಅಡ್ಡವಾಗಿ ಹಾಕಲಾದ ಮಣ್ಣು ದಿಣ್ಣೆಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ  ಯಕ್ಷಗಾನ ಕಲಾವಿದರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಯಕ್ಷಗಾನ  ಕಲಾವಿದ ನಾರಾಯಣ ಎಂಬವರೇ ಸಾವನ್ನಪ್ಪಿದ ದುರ್ದೈವಿ

ನಾರಾಯಣ ಅವರು ಬೈಂದೂರಿನ ಶಿರೂರಿನಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಹೋಗಿದ್ದು ಮಳೆಯ ಕಾರಣ ಪ್ರದರ್ಶನ ರದ್ದಾಗಿತ್ತು ಶಿರೂರಿನಿಂದ ಕುಂದಾಪುರಕ್ಕೆ ರಾ.ಹೆ.66 ರಲ್ಲಿ ಸ್ಕೂಟರ್‌ನಲ್ಲಿ ಭಾನುವಾರ ಬೆಳಗಿನ ಜಾವ ಹೊರಟಿದ್ದರು

ರಾ.ಹೆ.66ರ ಮುವತ್ತುಮುಡಿ ಬಳಿಯ ಕನ್ನಡಕುದ್ರು ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಮಣ್ಣು ದಿಣ್ಣೆಯ ಮೇಲೆ ಸ್ಕೂಟರ್ ಹಾಯಿಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು ಕೂಡಲೇ ಸ್ಥಳೀಯರು ಚಿಕಿತ್ಸೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು ಪರಿಕ್ಷಿಸಿದ ವೈದ್ಯರು ನಾರಾಯಣ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!