ಮಂಗಳೂರು: ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮದನಿ ನಗರ ಮಸೀದಿ ಬಳಿಯ ನಿವಾಸಿ ಬದ್ರು ಯಾನೆ ಬದ್ರುದ್ದೀನ್ ಎಂಬಾತನನ್ನು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ನೇತೃತ್ವದ ಆ್ಯಂಟಿ ಡ್ರಗ್ಸ್ ಟೀಮ್ನವರು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನ ಪತ್ತೆ ಕಾರ್ಯವನ್ನು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ದಾರ್ಥ ಗೋಯೆಲ್, ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್. ನಾಯಕ ಅವರ ನೇತೃತ್ವದಲ್ಲಿ ಆ್ಯಂಟಿ ಡ್ರಗ್ಸ್ ಟೀಮ್ನ ಪಿಎಸ್ಐ ಪುನೀತ್ ಗಾವಂಕರ್, ಮಹೇಶ್, ಶಾಜು ನಾಯರ್, ಶಿವಕುಮಾರ್, ಅಕ್ಟರ್ ಅವರ ತಂಡ ಪತ್ತೆ ಮಾಡಿದೆ.