Home » ಎಸಿಡ್ ದಾಳಿ : ಆರೋಪಿಯ ಬಂಧನ
 

ಎಸಿಡ್ ದಾಳಿ : ಆರೋಪಿಯ ಬಂಧನ

by Kundapur Xpress
Spread the love

ಮಂಗಳೂರು : ಸಮೀಪದ ಕಡಬ ಸರಕಾರಿ ಕಾಲೇಜಿನ ಆವರಣದಲ್ಲಿ ಪರೀಕ್ಷಾ ಪೂರ್ವ ತಯಾರಿ ನಡೆಸುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮೇಲೆ ಯುವಕನೋರ್ವ ಎಸಿಡ್ ಎರಚಿದ ಘಟನೆ ಇಂದು ಸಂಭವಿಸಿದೆ ಯುವಕನನ್ನು ಅಬಿನ್ ಎಂದು ಗುರುತಿಸಲಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ

ಆರೋಪಿಯು ಕೇರಳದ ಮಲ್ಲಪುರಂ ಜಿಲ್ಲೆಯ ನೆಲಂಬೂರು ತಾಲೂಕಿನ ಎಂ ಬಿ ಎ ವಿದ್ಯಾರ್ಥಿ ಎಂಬುದಾಗಿ ಪ್ರಾಥಮಿಕ ತನಿಕೆಯಿಂದ ತಿಳಿದುಬಂದಿದೆ ಆರೋಪಿ ಮಾಸ್ಕ್ ಹಾಗೂ ಕ್ಯಾಪ್‌ ಹಾಕಿಕೊಂಡು ಬಂದು ವಿದ್ಯಾರ್ಥಿನಿಯರ ಮೇಲೆ ಏಕಾಏಕಿ ಎಸಿಡ್‌ ದಾಳಿ ನಡೆಸಿದ್ದಾನೆ

ಎಸಿಡ್‌ ದಳಿಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ

ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸಿಡ್ ದಾಳಿಗೆ ಒಳಗಾದ ವಿದ್ಯಾರ್ಥಿನಿಯರನ್ನು ಅಲಿನ ಸಿಬಿ ಅರ್ಚನಾ ಅಮೃತ ಎಂದು ಗುರುತಿಸಲಾಗಿದೆ

   

Related Articles

error: Content is protected !!