136
ಕುಂದಾಪುರ: ಬೈಂದೂರಿನ ಆಸುಪಾಸಿನಲ್ಲಿ ತಿಮಿಂಗಿಲದ ಅಂಬರ್ ಗ್ರೀಸ್ ಎಂದು ನಂಬಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರು ವಂಚಕರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಿರಂಜನ್ ಎಸ್ (26), ಮಿಲನ್ ಮೊನಿಶ್ ಶೆಟ್ಟಿ (27) ಮತ್ತು ಪ್ರಥ್ವಿ ಡಾಮ್ನಿಕ್ (31) ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು ಜುಲೈ 12 ರಂದು ಬೈಂದೂರು ಯಡ್ತರೆ ಗ್ರಾಮದ ಹೊಸ ಬಸ್ಸು ನಿಲ್ದಾಣದಲ್ಲಿ ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್ ಗ್ರೀಸ್ ಎಂದು ಹೇಳಿ ರೂ 10 ಲಕ್ಷ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದರು.
ಬಂಧಿತರಿಂದ ಸುಮಾರು 3 ಕೆಜಿ 910 ಗ್ರಾಂ ತೂಕದ ತಿಮಿಂಗಿಲದ ಅಂಬರ್ ಗ್ರಿಸ್ ನಂತಿರುವ ಮೇಣದಂತಹ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ