ಮಂಗಳೂರು : ನಗರದ ಪಂಪ್ವೆಲ್ ಸರ್ಕಲ್ ಬಳಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಮಾರಾಟಕ್ಕೆ ಯತ್ನಿಸುತ್ತಿದ್ದ ಮೂರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ ಒಟ್ಟು 1.62 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ
ಬಂಧಿತರು ಚಿಕ್ಕಮಗಳೂರು ತಮಿಳು ಕಾಲೋನಿ ನಿವಾಸಿ ಪ್ರಸಕ್ತ ಬಂಟ್ವಾಳ ಮಂಗಲಪದವು ಪಾತಿರತೋಟದ ಬಾಡಿಗೆ ಮನೆಯಲ್ಲಿರುವ ಪ್ಯಾರೇಜಾನ್ ಯಾನೆ ಸೇಟು (37ವರ್ಷ) ಹಾಗೂ ಬದ್ರುದ್ದೀನ್ ಯಾನೆ ಬದ್ರು (28 ವರ್ಷ) ಮತ್ತು ತಮಿಳುನಾಡಿನ ರಾಜೇಶ್ (22 ವರ್ಷ)
ಆರೋಪಿಗಳಿಂದ 1. 57 ಕೋಟಿ ಮೌಲ್ಯದ 1. 575 ಕೆಜಿ ತೂಕದ ಅಂಬರ್ ಗ್ರೀಸ್ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಸ್ವಿಫ್ಟ್ ಕಾರು ಹಾಗೂ ಫೋನ್ ವಶಪಡಿಸಿಕೊಳ್ಳಲಾಗಿದೆ
ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ವಿವರ
1) 1.575 ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್)-( 1,57,50,000/-)
2) REDMI ಕಂಪನಿಯ ಮೊಬೈಲ್ ಫೋನ್ –1 (10,000/-)
3) ಕೆಎ-25-MG-0625 ನೇ ಸಿಲ್ವರ್ ಬಣ್ಣದ ಸ್ವಿಪ್ಟ್-1 (5,00,000/-)
4) MOTOROLA ಕಂಪನಿಯ ಮೊಬೈಲ್ ಫೋನ್ -1 (10,000/-)
5) REDMI ಕಂಪನಿಯ ಮೊಬೈಲ್ ಫೋನ್ -1 (10,000/-)
ಒಟ್ಟು ಮೌಲ್ಯ 1 ಕೋಟಿ 62 ಲಕ್ಷ ಎಂದು ಅಂದಾಜಿಲಾಗಿದೆ
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಶ್ರೀ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಶ್ರೀ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೋಂಡಿದ್ದರು