ಕುಂದಾಪುರ : ಕುಂದಾಪುರ ತಾಲೋಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ
ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಜುನಾಥ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಂಘಟಿತರಾಗಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಎಂಬ ಹೆಸರಿನ ಇಸ್ಪೀಟ್ ಜೂಜಾಟ ಆಟ ಅಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ಶಂಕರನಾರಾಯಣ ಪೊಲೀಸ್ ಠಾಣೆಯ ಪಿಎಸ್ಐ ಶಂಭುಲಿಂಗಯ್ಯ ಎಮ್.ಇ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ
ಆರೋಪಿತರು :
1) ಸುಬ್ರಹ್ಮಣ್ಯ ಕೊಠಾರಿ ಪ್ರಾಯ 33 ವರ್ಷ, ತಂದೆ: ಮಂಜುನಾಥ ಕೋಠಾರಿ, ವಾಸ: ಮಾರ್ಕೆಟ್ ರೋಡ್, ಸಿದ್ದಾಪುರ ಗ್ರಾಮ
2) ಅಶ್ರಫ್ ಪ್ರಾಯ 25 ವರ್ಷ, ತಂದೆ: ಶಹಜಹಾನ್ ,ವಾಸ: ವರಾಹಿ ರೋಡ್, ಸಿದ್ದಾಪುರ ಗ್ರಾಮ
3) ಸುನೀಲ್ ಪ್ರಾಯ: 23 ವರ್ಷ, ತಂದೆ: ಶಂಕರ ಶೆಟ್ಟಿ, ವಾಸ: ವರಾಹಿ ರೋಡ್, ಸಿದ್ದಾಪುರ ಗ್ರಾಮ
4) ಧೀರಜ್ ಪ್ರಾಯ 29 ವರ್ಷ, ತಂದೆ: ಕೃಷ್ಣಮೂರ್ತಿ, ವಾಸ: ವರಾಹಿ ರೋಡ್, ಸಿದ್ದಾಪುರ ಗ್ರಾಮ
5) ಶಂಕರ ಪ್ರಾಯ 43 ವರ್ಷ, ತಂದೆ: ರಘುರಾಮ ಕೊಠಾರಿ, ವಾಸ: ಮೂಡುಬಗೆ, ಅಂಪಾರು ಗ್ರಾಮ
6) ಸುಧೀರ್ ಕುಮಾರ ಶೆಟ್ಟಿ ಪ್ರಾಯ 42 ವರ್ಷ, ತಂದೆ: ಶಿವರಾಮ ಶೆಟ್ಟಿ, ವಾಸ: ಜನ್ಸಾಲೆ, ಸಿದ್ದಾಪುರ ಗ್ರಾಮ
7) ಮಧುಕರ ಶೆಟ್ಟಿ ಪ್ರಾಯ 48 ವರ್ಷ, ತಂದೆ: ಕೃಷ್ಣಪ್ಪ ಶೆಟ್ಟಿ ವಾಸ: ಮೂಡುಬಗೆ, ಅಂಪಾರು ಗ್ರಾಮ
8) ಮನೋಹರ ಪ್ರಾಯ; 46 ವರ್ಷ, ತಂದೆ; ಲಕ್ಷ್ಮಣ ವಾಸ; ಜನ್ಸಾಲೆ, ಸಿದ್ದಾಪುರ ಗ್ರಾಮ
9) ಗಣೇಶ ಪ್ರಾಯ; 33 ವರ್ಷ, ತಂದೆ; ವೆಂಕಟ್, ವಾಸ; ಅಗಳಿಬೈಲು, ಸಿದ್ದಾಪುರ ಗ್ರಾಮ
10) ರಾಮ ಪ್ರಾಯ; 34 ವರ್ಷ, ತಂದೆ; ಮಂಜುನಾಥ, ವಾಸ; ಕಾರೆಬೈಲು, ಸಿದ್ದಾಪುರ ಗ್ರಾಮ
ಅಪಾದಿತರಿಂದ ಅಂದರ್ – ಬಾಹರ್ ಆಟಕ್ಕೆ ಬಳಸಿದ ನಗದು ಹಣ 8,810/ರೂ, 10 ಮೊಬೈಲ್ ಪೋನ್ ಇಸ್ಪೀಟ್ ಜೂಜಾಟ ಆಡಲು ಬಂದಿದ್ದ KA20-EH1107 HERO ಕಂಪನಿಯ ಮೋಟಾರು ಸೈಕಲ್, KA19-EM6793 HERO SPLENDER ಮೋಟಾರು ಸೈಕಲ್ , KA20-EL3575 YAMAHA ಕಂಪನಿಯ ಮೋಟಾರು ಸೈಕಲ್, 52 ಇಸ್ಪೀಟ್ ಎಲೆಗಳು, 7 ಪ್ಲಾಸ್ಟೀಕ್ ಕುರ್ಚಿಗಳು, ಒಂದು ಪ್ಲಾಸ್ಟೀಕ್ ಟೇಬಲ್ , ಕಪ್ಪು ಮತ್ತು ಕೇಸರಿ ಬಣ್ಣ ಮಿಶ್ರಿತ ಬಟ್ಟೆ ಹಾಗೂ ಒಂದು ಮೇಣದ ಬತ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

