Home » ಚೈತ್ರಾ ಕುಂದಾಪುರ ತಂಡದಿಂದ ವಶಕ್ಕೆ ಪಡೆದ ಹಣಕ್ಕೆ ಅರ್ಜಿ
 

ಚೈತ್ರಾ ಕುಂದಾಪುರ ತಂಡದಿಂದ ವಶಕ್ಕೆ ಪಡೆದ ಹಣಕ್ಕೆ ಅರ್ಜಿ

by Kundapur Xpress
Spread the love

ಉಡುಪಿ : ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ಪಡೆದು ವಂಚಿಸಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಹಾಗೂ ಅಭಿನವಶ್ರೀ ಹಾಲವೀರಪ್ಪಜ್ಜ ಮತ್ತಿತರ ವಿರುದ್ಧ ದಾಖಲಾಗಿರುವ             ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಹಣ ಬಿಡುಗಡೆಗೆ ಕೋರಿ ದೂರುದಾರ ಗೋವಿಂದ ಬಾಬು ಪೂಜಾರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕ್ರಿಮಿನಲ್ ಅರ್ಜಿ ಶುಕ್ರವಾರ ನ್ಯಾ. ಎಸ್. ಆರ್. ಕೃಷ್ಣಕುಮಾರ್ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು. ಗೋವಿಂದ ಬಾಬು ಪೂಜಾರಿ ಹಣ ಬಿಡುಗಡೆ ಕೋರಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ವಜಾಗೊಳಿಸಿದೆ.

 

Related Articles

error: Content is protected !!