ಕುಂದಾಪುರ : ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25 ವರ್ಷಗಳ ಹಿಂದೆ ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ
ಮಹಮದ್ ಹನೀಫ್ ಬಂಧಿತ ಆರೋಪಿ ಖೋಟಾನೋಟು ಪ್ರಕರಣಕ್ಕೆ ಸಂಭಂಧಿಸಿದಂತೆ 1999ರಲ್ಲಿ ಜೈಲಿನಿಂದ ಜಾಮೀನು ಪಡೆದು ಸುಮಾರು 25 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಈ ಪ್ರಕರಣದಲ್ಲಿ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನೂತನ್ ಡಿ ಮತ್ತು ಸಿಬ್ಬಂದಿ ಹೆಚ್ ಸಿ ರಾಜು, ಹೆಚ್ ಸಿ ಅಶೋಕ್ ಶೆಟ್ಟಿಯವರ ತಂಡ ಆರೋಪಿಯನ್ನು ಕೇರಳದ ಕಾಸರಗೋಡಿನಿಂದ ಪತ್ತೆ ಹಚ್ಚಿ ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದಾರೆ.