ಮಣಿಪಾಲ :ಪೊಲೀಸರ ಸೋಗಿನಲ್ಲಿ ಜೋಡಿಯಿಂದ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಮಣಿಪಾಲ ಪೊಲೀಸರನ್ನು ಇಬ್ಬರನ್ನು ಬಂಧಿಸಿದ್ದಾರೆ ಹಾವೇರಿಯ ಹನುಮಂತಪ್ಪ ಮಹದೇವಪ್ಪ ಹಾಗೂ ಮುರುಡೇಶ್ವರದ ಲಕ್ಷ್ಮಣ ಕುಪ್ಪಗೊಂಡ ಬಂಧಿತ ಆರೋಪಿಗಳು

ಶಿರ್ವ ಬಂಟಕಲ್ಲಿನ ಮಂಜುನಾಥ ಎಂಬವರು ತನ್ನ ಗೆಳತಿ ಜೊತೆ ಮಣಿಪಾಲದ ಬಡಗುಬೆಟ್ಟು ಎಂಬಲ್ಲಿರುವ ಅರ್ಭಿ ಫಾಲ್ಸ್ ಎಂಬಲ್ಲಿ ಕುಳಿತು ಮಾತನಾಡುತ್ತಿದ್ದರು.
ಈ ವೇಳೆ ಅಲ್ಲಿಗೆ ಬಂದ ಹನುಮಂತಪ್ಪ ನಾನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನೀವು ಇಲ್ಲಿ ಯಾಕೆ ಕುಳಿತಿದ್ದೀರಿ ಎಂದು ಪ್ರಶ್ನಿಸಿದನು ನಿಮ್ಮ ಮೇಲೆ ಕೇಸ್ ಮಾಡುತ್ತೇನೆ ಎಂದು ಬೆದರಿಸಿದ ಆತ ಮಣಿಪಾಲರ ಎಸ್ಐ ಹೇಳಿದರೆ ಬಿಡುತ್ತೇನೆ ಎಂದು ಹೇಳಿದನು. ಬಳಿಕ ಎಸ್ ಐ ಎಂದು ಹೇಳಿಕೊಂಡು ಲಕ್ಷ್ಮಣ ಕುಪ್ಪಗೊಂಡನಿಗೆ ಕರೆ ಮಾಡಿದ ಹನುಮಂತಪ್ಪ ಲೌಡ್ ಸ್ಪೀಕರ್ ನಲ್ಲಿಟ್ಟು ಮಾತನಾಡಿಸಿದನು
ಲಕ್ಷ್ಮಣ್ ಫೋನ್ ಕರೆಯಲ್ಲಿ ಮಾತನಾಡಿ 5000 ಕೊಟ್ಟರೆ ಬೀಡುತ್ತೇನೆ ಇಲ್ಲದಿದ್ದರೆ ಜೀಪು ಕಳಿಸಿ ಠಾಣೆಗೆ ಕರೆಸುತ್ತೇನೆ ಎಂದು ಬೆದರಿಸಿದನು. ಬಳಿಕ ಮಂಜುನಾಥ್ ಅವರ ಗೂಗಲ್ ಪೇಯಿಂದ ಬಲತ್ಕಾರವಾಗಿ ಹನುಮಂತಪ್ಪ ಮೊಬೈಲ್ ಸಂಖ್ಯೆಗೆ 5000 ರೂಪಾಯಿಯನ್ನ ವರ್ಗಾವಣೆ ಮಾಡಿ ವಂಚಿಸಲಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

