Home » ಉಳ್ಳಾಲ ಬಳಿ ಹಾಡು ಹಗಲೇ ಬ್ಯಾಂಕ್‌ ದರೋಡೆ
 

ಉಳ್ಳಾಲ ಬಳಿ ಹಾಡು ಹಗಲೇ ಬ್ಯಾಂಕ್‌ ದರೋಡೆ

by Kundapur Xpress
Spread the love

ಉಳ್ಳಾಲ : ಬೀದರ್‌ನಲ್ಲಿ 93 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ದಾಖಲಾಗಿದೆ ಕಾರಿನಲ್ಲಿ ಬಂದ ಆಗಂತುಕರು ಚಿನ್ನ ಒಡವೆ, ಹಣವನ್ನೆಲ್ಲಾ ಕದ್ದು ಪರಾರಿಯಾಗಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿದ್ದು ಹಾಡಹಗಲೇ 5 ಮಂದಿ ತಂಡದ ಆಗಂತುಕರು ಬ್ಯಾಂಕಿಗೆ ನುಗ್ಗಿ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನ ಒಡವೆ, ನಗದುಗಳೆಲ್ಲವನ್ನೂ ಕಳವು ಮಾಡಿದ್ದಾರೆ ಎನ್ನಲಾಗಿದೆ

ಕೆ.ಸಿ ರೋಡ್ ಕೋಟೆಕಾರು ಬ್ಯಾಂಕ್ ಶಾಖೆಯಿಂದ ಭಾರೀ ದರೋಡೆ ಮಾಡಲಾದ 5 ಮಂದಿ ಆಗಂತುಕರು ಫಿಯೇಟ್ ಕಾರಿನಲ್ಲಿ ಬಂದಿದ್ದರು. ಮಾರಕಾಸ್ತ್ರ ತೋರಿಸಿ ದರೋಡೆ ನಡೆಸಿದ ತಂಡ ಮಂಗಳೂರಿನ ಕಡೆಗೆ ಪರಾರಿಯಾಗಿದೆ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸ್ ತಂಡ ಆಗಂತುಕರಿಗಾಗಿ ತೀವ್ರ ಶೋಧ ನಡೆಸುತ್ತಿದೆ

 

Related Articles

error: Content is protected !!