ಕುಂದಾಪುರ : ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಎಸ್ಎನ್ಎಲ್ ಮೈಕ್ರೋ ಟವರ್ ಕಟ್ಟಡದ ಒಳಗೆ ಅಳವಡಿಸಿದ್ದ 24 ನಿರುಪಯುಕ್ತ ಬ್ಯಾಟರಿಗಳಲ್ಲಿ 6 ಬ್ಯಾಟರಿಗಳು ಕಳವಾಗಿದೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಶಂಕರನಾರಾಯಣ ಗ್ರಾಮದ ಗೋಳಿಕಟ್ಟೆ ಬಳಿ ಗುಡ್ಡೆ ಮೇಲಿರುವ ಬಿಎಸ್ಎನ್ಎಲ್ ಮೈಕ್ರೋ ಟವರ್ ಕಟ್ಟಡದ ಒಳಗೆ ಅಳವಡಿಸಲಾಗಿದ್ದ 24 ಬ್ಯಾಟರಿಗಳಲ್ಲಿ 6 ಬ್ಯಾಟರಿಗಳನ್ನು ನ.23 ರಿಂದ ನ.27ರ ಮಧ್ಯದಲ್ಲಿ ಕಳವಾಗಿದ್ದು ಕಳವಾದ ಬ್ಯಾಟರಿಯ ಮೌಲ್ಯ 30.000 ಎಂದು ಬೆಂಗಳೂರಿನ ಪಿಟಿಪಿಐ ಕಂಪೆನಿಯ ಟೆಕ್ನಿಷಿಯನ್ ಪ್ರದೀಪ್ ದೂರು ನೀಡಿದ್ದಾರೆ