195
ಮಂಗಳೂರು : ರಸ್ತೆ ತೆರಿಗೆ ಪಾವತಿಸದೇ ಓಡುತ್ತಿದ್ದ ದಿಶಾ ಟ್ರಾವೆಲ್ಸ್ ಬಸ್ಸೊಂದನ್ನು ಮಂಗಳೂರಿನ ಆರ್ ಟಿ ಓ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ
ಮಂಗಳೂರು ನಗರದ ಕೊಟ್ಟಾರಚೌಕಿಯ ಬಳಿಯಲ್ಲಿ ಆರ್ ಟಿ ಓ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ
ಕುಂದಾಪುರದ ಗಂಗೊಳ್ಳಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ದಿಶಾ ಬಸ್ಸನ್ನು ಮಂಗಳೂರಿನ ಆರ್ ಟಿ ಓ ಅಧಿಕಾರಿಗಳ ತಪಾಸಣೆ ವೇಳೆ ದಿನಾಂಕ 01.11.2024 ರಿಂದ ರಸ್ತೆ ತೆರಿಗೆ ಕಟ್ಟದೇ ಬಸ್ ಓಡುತ್ತಿತ್ತು ಎನ್ನಲಾಗಿದೆ
ಆರ್ ಟಿ ಓ ಅಧಿಕಾರಿಗಳು ಬಸ್‌ನ್ನು ವಶಪಡಿಸಿಕೊಂಡು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ ಜಡಿಜಡಿ ಮಳೆಯಲ್ಲೇ ಬಸ್ಸಿನಿಂದ ಇಳಿದ ಪ್ರಯಾಣಿಕರು ಬೆಂಗಳೂರಿಗೆ ಹೋಗಲು ಪರದಾಡಬೇಕಾಯಿತು

