Home » ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ವಶ ಇಬ್ಬರ ಸೆರೆ
 

ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ವಶ ಇಬ್ಬರ ಸೆರೆ

by Kundapur Xpress
Spread the love

ಮಂಗಳೂರು : ನಿಷೇಧಿತ ಮಾದಕ ವಸ್ತುವಾದ ಎಂ ಡಿ ಏಂ ಎ  ( MDMA ) ಯನ್ನು ಮಂಗಳೂರು ನಗರದ ನೆಹರೂ ಮೈದಾನ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಯವರಾದ ಪಿ ಎ ಹೆಗಡೆ ರವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ

ಬಂಟ್ವಾಳದ ಫರಂಗಿಪೇಟೆಯ ಪುದು ಗ್ರಾಮ ನಿವಾಸಿಯಾದ ಮಹಮ್ಮದ್ ಆಶ್ರಫ್ ಯಾನೆ ಚೋಟಾ ಆಶ್ರಫ್(43) ಹಾಗೂ ಮಂಗಳೂರಿನ ಪೆರ್ಮನ್ನೂರು, ಪಿಲಾರ್ ದಾರಂದಬಾಗಿಲು ಹೊಸಗದ್ದೆ ಮನೆ ನಿವಾಸಿಯಾದ ದಾವೂದ್ ಫರ್ವೆಝ್(36)ರವರನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ

ಆರೋಪಿಗಳು ಬೆಂಗಳೂರಿನಿಂದ ನಿಷೇಧಿತ ಮಾದಕ ವಸ್ತುವಾದ MDMA ವನ್ನು ಖರೀದಿಸಿಕೊಂಡು ಕಾರಿನಲ್ಲಿ ಮಂಗಳೂರಿಗೆ ಬಂದು ಮಂಗಳೂರು ನಗರದ ನೆಹರೂ ಮೈದಾನದ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು

ಆರೋಪಿಗಳಿಂದ ಒಟ್ಟು 55.5 ಗ್ರಾಂ ತೂಕದ ರೂ. 2,77,500/- ಮೌಲ್ಯದ ಎಂಡಿಎಂಎ ಮಾದಕ ವಸ್ತು, 2 ಮೊಬೈಲ್ ಫೋನ್ ಗಳು 3,230 ರೂ ನಗದು  KA-19-MF-6668 ನೇ ನಂಬರಿನ ಸಿಲ್ವರ್ ಬಣ್ಣದ ಮಾರುತಿ ಬೆಲೆನೊ ಕಾರು ಹಾಗೂ  ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್ ಗಳು, ನಗದು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಕಾರಿನ ಒಟ್ಟು ಮೌಲ್ಯ ರೂ 13,06,230/- ರೂಪಾಯಿ ಎಂದು ಅಂದಾಜಿಸಲಾಗಿದೆ  ಈ ಬಗ್ಗೆ ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!