87
ನವದೆಹಲಿ : ಕಳೆದ ವಾರ ದೆಹಲಿಯಲ್ಲಿ ವಾಯು ವಿಹಾರಕ್ಕೆ ಹೊರಟಿದ್ದಾಗ ತಮಿಳುನಾಡಿನ ಕಾಂಗ್ರೆಸ್ ಸಂಸದೆ ಆರ್.ಸುಧಾ ಅವರ ಸರ ಕದ್ದಿದ್ದವನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಜೊತೆಗೆ ಆತನಿಂದ 30 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಸಂಸದೆ ನೀಡಿದ ದೂರು ಆಧರಿಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಸೋಹನ್ ರಾವತ್ ಎಂಬಾತನನ್ನು ಬಂಧಿಸಿದ್ದಾರೆ. ಈತನ ವಿರುದ್ಧ 26 ಕ್ರಿಮಿನಲ್ ಪ್ರಕರಣಗಳಿದ್ದು,
ಈ ವರ್ಷಾರಂಭದಲ್ಲಿ ಬೈಕ್ ಕದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.27ರಿಂದ ಜಾಮೀನು ಪಡೆದಿದ್ದ. ಚೈನ್, ಬೈಕ್ ಕಳ್ಳತನದಲ್ಲಿ ಈತ ಕುಖ್ಯಾತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

