ಕೋಟ : ಇಲ್ಲಿನ ಸಾಲಿಗ್ರಾಮದ ಕಾರ್ಕಡದ ಪಡುಹೋಳಿಯಲ್ಲಿ ನಿನ್ನೆ ಪತಿ ಪತ್ನಿಯರ ಮಧ್ಯೆ ನಡೆದ ಗಲಾಟೆ ಪತ್ನಿಯ ಸಾವಿನೊಂದಿಗೆ ಅಂತ್ಯಗೊಂಡಿದೆ. ಸಾಲಿಗ್ರಾಮ ಪರಿಸರದಲ್ಲಿ ಬಾಣಸಿಗನಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಸ್ತಾನ ಗುಂಡ್ಮಿ ನಿವಾಸಿ ಕಿರಣ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ. ಕಿರಣನ ಪತ್ನಿ ಜಯಶ್ರೀ(32ವರ್ಷ) ತಲೆಗೆ ಪೆಟ್ಟಾಗಿದ್ದು ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ ಗಂಡ ಹೆಂಡತಿಯ ನಡುವೆ ಪ್ರತಿ ದಿನ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು ಇದು ತಾರಕಕ್ಕೇರಿದ್ದಲ್ಲದೇ ಪತಿ ಕತ್ತಿಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಗಂಭೀರ ಗಾಯಗೊಂಡ ಪತ್ನಿಯನ್ನು ಉಡುಪಿ ಆಸ್ಪತ್ರೆಗೆ ಪತಿ ಕೊಂಡ್ಯೊಯುವ ಸಂದರ್ಭದಲ್ಲೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ವಿವರ 9 ತಿಂಗಳ ಹಿಂದಷ್ಟೇ ಕಿರಣ ಉಪಾಧ್ಯಾಯ ಹಾಗೂ ಬೀದರ್ ದೊಣಗಪುರ ಮೂಲದ ಜಯಶ್ರೀ ಎಂಬುವರು ವಿವಾಹವಾಗಿದ್ದರು. ಕಳೆದ ಮೂರು ತಿಂಗಳಿನಿಂದ ಸಾಲಿಗ್ರಾಮ ಕಾರ್ಕಡ ಪಡುಹೋಳಿಯ ಅಂಗನಾಡಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಸ್ಥಳೀಯರು ಉಲ್ಲೇಖಿಸುವಂತೆ ಪತ್ನಿ ಜಯಶ್ರೀಗೆ ವಿಪರೀತ ಮೊಬೈಲ್ ರೀಲ್ಸ್ ಹಾಗೂ ಅನ್‍ಲೈನ್ ಮೂಲಕವೇ ಕಾಲ ಕಳೆಯುತ್ತಿದ್ದು ಇದರಿಂದಾಗಿ ಪ್ರತೀ ದಿನ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದಲೇ ಜಗಳ ತಾರಕಕ್ಕೆರಿದ್ದು ಪತಿ ಪತ್ನಿಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾಗ ಪತ್ನಿ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಕೋಟ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪತ್ನಿ ತಾರಸಿಯಿಂದ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ಆರೋಪಿ ಕಿರಣ್ ಆರಕ್ಷಕರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ನಿಜವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ಜಯಶ್ರೀ ಮೃತ ದೇಹವನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ