Home » ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳ ಪತ್ತೆ
 

ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳ ಪತ್ತೆ

by Kundapur Xpress
Spread the love

ಉಡುಪಿ: ಅನಧಿಕೃತ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳನ್ನು ಕಾರ್ಕಳ , ಬ್ರಹ್ಮಾವರ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ 3 ಸ್ಥಳಗಳಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ಪತ್ತೆಹಚ್ಚಿ ದಾಳಿ ನಡೆಸಲಾಗಿದೆ.ದಾಳಿ ವೇಳೆ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಾಗುತ್ತಿದೆ.ವಶಪಡಿಸಿಕೊಂಡ ಪಟಾಕಿಗಳನ್ನು ಪರವಾನಗಿಯುಳ್ಳ ಸ್ಫೋಟಕ ಮ್ಯಾಗಜೀನ್ ಸಂಗ್ರಹ ಸ್ಥಳಕ್ಕೆ ಸ್ಥಳಾಂತರಿಸಿ, ನಂತರ ನಾಶಪಡಿಸಲಾಗುವುದು. ಮಿಯಾರ್, ಕುಂಜಾಲು ಹಾಗೂ ತೆಕ್ಕಟ್ಟೆ ಪ್ರದೇಶಗಳಲ್ಲಿ ಈ ದಾಳಿ ನಡೆದಿದೆ.

ಈ ಬಗ್ಗೆ ಸ್ಫೋಟಕ ಕಾಯ್ದೆ ಸೆಕ್ಷನ್ 9B(1)(b) ಹಾಗೂ ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್ 287, 288 ರಡಿ ಪ್ರಕರಣ ದಾಖಲಿಸಲಾಗಿದೆ.

 

Related Articles

error: Content is protected !!