220
ಚಿನ್ನದ ನಕ್ಲೆಸ್ ಕಳವು :
ಕುಂದಾಪುರ : ಉಪ್ಪಿನಕುದ್ರು ನಿವಾಸಿ ಅನುಷಾ ಎಂಬವರ ಚಿನ್ನದ ಲಾಂಗ್ ನಕ್ಸಸ್ ಕಳವಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
9 ಪವನು ತೂಕದ ಚಿನ್ನದ ಲಾಂಗ್ ನಕ್ಲೆಸ್ ನ್ನು ಮನೆಯ ಕಪಾಟಿನಲ್ಲಿರಿಸಿ ಸಂಬಂಧಿಕರ ಮನೆಗೆ ಹೋಗಿದ್ದು, ವಾಪಾಸು ಬಂದು ನೋಡುವಾಗ ನಕ್ಸೆಸ್ ಕಳವು ಆಗಿರುವುದು ಕಂಡುಬಂದಿದೆ. ಕಳವಾದ ಸೊತ್ತಿನ ಮೌಲ್ಯ 4 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ
ನದಿಗೆ ಬಿದ್ದು ಮೀನುಗಾರ ಸಾವು :
ಬೈಂದೂರು ತಾಲೂಕಿನ ಬಡಾಕೆರೆ ನಿವಾಸಿಯಾದ ಮಂಜು ಎಂಬವರು ಅಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ
57 ವರ್ಷ ಪ್ರಾಯದ ಅವರು ಸೌಪರ್ಣಿಕಾ ನದಿಗೆ ಬಲೆ ಹಾಕಿ ಮೀನು ಹಿಡಿಯಲೆಂದು ಹೋಗಿದ್ದು ಬಲೆ ಹಾಕುವ ಸಮಯ ಆಕಸ್ಮಿಕ ಹೊಳೆಗೆ ಬಿದ್ದು ಮೃತಪಟ್ಟಿರಬಹುದೆಂದು ಪುತ್ರ ಸಂತೋಷ್ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

