61
ಕುಂದಾಪುರ: ಫೇಸ್ ಬುಕ್ ಮೂಲಕ ಸಂದೇಶ ಕಳುಹಿಸಿ, ಮೊಬೈಲ್, ಬ್ಯಾಗ್ ಹಾಗೂ 50 ಸಾವಿರ ಡಾಲರ್ (56 ಲಕ್ಷ ರೂ.) ನೀಡುವುದಾಗಿ ಸಂದೇಶ ಕಳುಹಿಸಿ, ಸೈಬರ್ ವಂಚಕರು ವಂಚಿಸಿರುವುದಾಗಿ ಕೋಟೇಶ್ವರ ಗ್ರಾಮದ ಹೊಸ ಬಡಾಕೇರಿ ಹೂವಿನಕೆರೆ ನಿವಾಸಿ ರಮೇಶ ಅವರ ಪತ್ನಿ ಅಭಿನಯ ದೂರು ನೀಡಿದ್ದಾರೆ.
ಕಳೆದ ಮೇ ಮೊದಲ ವಾರದಲ್ಲಿ ಡೆನಿಯಲ್ ಮೈಕಲ್ ಎಂಬುವರಿಂದ ಫೇಸ್ ಬುಕ್ ಖಾತೆಗೆ ಗುಡ್ ಮಾರ್ನಿಂಗ್ ಅನ್ನುವ ಸಂದೇಶ ಬಂದಿದ್ದು, ಆ ಬಳಿಕ ಒಂದು ಮೊಬೈಲ್, ಬ್ಯಾಗ್, 50 ಸಾವಿರ ಡಾಲರ್ ಗಿಫ್ಟ್ ರೂಪದಲ್ಲಿ ಮನೆಗೆ ಕಳುಹಿಸುವುದಾಗಿ ಸಂದೇಶ ಬಂದಿದೆ. ಆ ಹಣ, ಗಿಫ್ಟ್ ಎಲ್ಲ ಮುಂಬಯಿಯಲ್ಲಿದ್ದು, ಅದು ಬರಬೇಕಾದರೆ 50 ಸಾವಿರ ರೂ. ಕಳುಹಿಸಿ ಎಂದಿದ್ದಕ್ಕೆ ಹಂತ ಹಂತವಾಗಿ ಮೇ ನಿಂದ ಆಗಸ್ಟ್ ವರೆಗೆ ಒಟ್ಟಾರೆ 11,92,500 ರೂ. ಕಳುಹಿಸಿದ್ದು, ಸೈಬರು ವಂಚಕರು ಮೋಸ ಮಾಡಿ ಪಡೆದು ಕೊಂಡಿರುವುದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

