Home » ಆಟೋ ಚಾಲಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
 

ಆಟೋ ಚಾಲಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

by Kundapur Xpress
Spread the love

ಕುಂದಾಪುರ : ಕೋಟೇಶ್ವರ ಸಮೀಪದ ಕಾಳಾವರ ಗ್ರಾಪಂ ಕಚೇರಿ ಸಮೀಪ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆಟೋ ಚಾಲಕ ಸುನಿಲ್ ರಸ್ಕಿನಾ (49) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಪರೀತ ಮದ್ಯವ್ಯಸನಿಯಾಗಿದ್ದಇವರು ತಿಂಗಳ ಹಿಂದೆ ಮನೆ ಮಾರಾಟ ಮಾಡಿ ಚಂದ್ರ ಎಂಬವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.  ಇವರು ಜೀವನೋಪಾಯಕ್ಕಾಗಿ ಅಟೋರಿಕ್ಷಾ ಓಡಿಸಿಕೊಂಡಿದ್ದರು

ಗುರುವಾರ ಮನೆಯ ಸಮೀಪ ದುರ್ವಾಸನೆ ಬರುತ್ತಿರುವುದನ್ನು ನೋಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಗಿಲು ಒಡೆದು ನೋಡಿದಾಗ ಸುನಿಲ್ ರಸ್ಕಿನಾ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಪರೀತ ಮದ್ಯಸೇವನೆ ಅಥವಾ ಅನಾರೋಗ್ಯದಿಂದಲೋ ವಾರದ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!