ಕುಂದಾಪುರ : ಕೋಟ ರಾಷ್ಟ್ರೀಯ ಹೆದ್ದಾರಿ 66 ರ ಮಣೂರು ಬಾಳೆಬೆಟ್ಟು ಸಮೀಪ ಗುರುವಾರ ರಾತ್ರಿ ಅಟೋದಿಂದ ಆಯತಪ್ಪಿ ರಸ್ತೆಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ ನಡೆದಿದೆ
ಮೃತಪಟ್ಟವರನ್ನು ಪಾರಂಪಳ್ಳಿಯ ಪಡುಕೆರೆ ನಿವಾಸಿಯಾದ ಪ್ರಕಾಶ್ ಪೂಜಾರಿ (40 ವರ್ಷ) ಎಂದು ಗುರುತಿಸಲಾಗಿದೆ
ಪ್ರಕಾಶ್ ಪೂಜಾರಿಯವರು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿ ಆಗಿರುವ ತಾಯಿಗೆ ರಾತ್ರಿ ಊಟ ತರಲೆಂದು ಕೊಟೇಶ್ವರದಿಂದ ಬಾಡಿಗೆ ಆಟೋ ಮಾಡಿಕೊಂಡು ಪಾರಂಪಳ್ಳಿ ಪಡುಕೆರೆಯ ಮನೆಗೆ ಬಂದು ಅದೇ ಆಟೋದಲ್ಲಿ ವಾಪಸ್ ಆಸ್ಪತ್ರೆಗೆ ಹೋಗುತ್ತಿದ್ದಾಗ ಮಣೂರು ಬಾಳೇಬೆಟ್ಟು ಸಮೀಪ ಅಟೋ ಚಾಲಕ ಹೊಂಡ ತಪ್ಪಿಸುವ ಭರದಲ್ಲಿ ಬ್ರೇಕ್ ಹಾಕಿದಾಗ ಆಯತಪ್ಪಿ ಆಟೋದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ