121
ಚೆನ್ನೈ : ಮಾದಕ ವಸ್ತು ಸೇವನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟ ಶ್ರೀಕಾಂತ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಪಬ್‌ನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಶ್ರೀಕಾಂತ್ ಅವರನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಅವರ ದೇಹದಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಅವರು ಜಾನ್ ಎಂಬ ವ್ಯಕ್ತಿಯಿಂದ ಕೊಕೇನ್ ಖರೀದಿಸಿದ್ದು ಕಂಡುಬಂದಿದೆ. ಡ್ರಗ್ಸ್ ಕೇಸಲ್ಲಿ ಜಾನ್‌ನನ್ನು ಕೆಲ ದಿನಗಳ ಹಿಂದಷ್ಟೇ ಚೆನ್ನೈ ಪೊಲೀಸರು ಬಂದಿಸಿದ್ದರು.

