Home » ಹಳೇ ನಕಲಿ ಬಂಗಾರ ನೀಡಿ ವಂಚನೆ
 

ಹಳೇ ನಕಲಿ ಬಂಗಾರ ನೀಡಿ ವಂಚನೆ

by Kundapur Xpress
Spread the love

ಕುಂದಾಪುರ : ಇಲ್ಲಿನ ಅಪೂರ್ವ ಚಿನ್ನದ ಅಂಗಡಿಗೆ ಮಹಿಳೆಯರಿಬ್ಬರು ಗ್ರಾಹಕರಂತೆ ಬಂದು ಹಳೆಯ ಚಿನ್ನ ಇದೆ ಎಂದು ಹೇಳಿ ಅದನ್ನು ಕೊಟ್ಟು ಹೊಸ ಚಿನ್ನ ಖರೀದಿ ಮಾಡಿ ಸುಮಾರು 2.50 ಲಕ್ಷ ರೂ. ವಂಚಿಸಿ ಪರಾರಿಯಾದ ಘಟನೆ ನಡೆದಿದೆ.

ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಮಹಿಳೆಯರು ನಕಲಿ ಚಿನ್ನವನ್ನು ತೋರಿಸಿದಾಗ ಅಂಗಡಿ ಮಾಲೀಕರು ಆ ಚಿನ್ನದಲ್ಲಿ ಹಾಲ್‌ಮಾರ್ಕ್ ಇದೆಯೇ ಎಂದು ಪರಿ ಶೀಲಿಸಿ ನಂತರ ಅದನ್ನು ತೆಗೆದು ಕೊಂಡು ಅವರಿಗೆ ಹೊಸ ಚಿನ್ನ ಕೊಟ್ಟು ಕಳುಹಿಸಿದ್ದು ನಂತರ ಮೋಸ ಹೋಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಿನ್ನ ಪಡೆದ ಅಂಗಡಿ ಮಾಲೀಕ ಹಳೆಯ ಚಿನ್ನ ಎಂದು ಹೇಳಿ ಕೊಟ್ಟ ಆಭರಣ ಪರಿಶೀಲಿಸಿದಾಗ ಅದು ಬರಿ ತಾಮ್ರ ಎಂದು ರಿಪೋರ್ಟ್‌ನಲ್ಲಿ ಕಂಡುಬಂದಿದೆ. ಅಂಗಡಿ ಮಾಲೀಕನ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   

Related Articles

error: Content is protected !!