211
ಇಬ್ಬರು ಆರೋಪಿಗಳ ಬಂಧನ
ಮಂಗಳೂರು : ಸುರತ್ಕಲ್ ಇಡ್ಯಾ ಗ್ರಾಮದ ಗೋವಿಂದದಾಸ ಕಾಲೇಜು ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ ಒರಿಸ್ಸಾ ಮೂಲದವರಾದ ಚಿಂತಾಮಣಿ ಮತ್ತು ದುಬ ಎಂಬವರು ಗಾಂಜಾ ಮಾರಾಟ ಮಾಡಲಿಕ್ಕೆ ಬಂದ ಬಗ್ಗೆ ಖಚಿತ ಮಾಹಿತಿ ಪಡೆದ ಸುರತ್ಕಲ್ ಪೊಲೀಸ್ ಠಾಣಾ ನಿರೀಕ್ಷಕರಾದ ಎಂ ಮಹೇಶ್ ಪ್ರಸಾದ್ ಅವರು ಆರೋಪಿಗಳನ್ನು ಬಂಧಿಸಿದ್ದಾರೆ
ಬಂಧಿತರಿಂದ ಸುಮಾರು 3 ಕೆಜಿ 180 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ

