ಮಂಗಳೂರು :ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಂಗಳೂರು ನಗರ ಹಾಗೂ ಕೇರಳಕ್ಕೆ ಕಾರಿನಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಕಾಸರಗೋಡಿದ ನಿವಾಸಿಯಾದ ಮೋಹಿದ್ದೀನ್ ಶಬ್ಬೀರ್ (35) ವರ್ಷ ಎಂಬಾತನ್ನು ಮಂಗಳೂರು ಸಿ ಸಿ ಬಿ ಪೊಲೀಸರು ಬಂಧಿಸಿದ್ದು ಆತನಿಂದ 23,250 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ
ಸೋಮವಾರದಂದು ವಿಶಾಖಪಟ್ಟಣದಿಂದ ಮಹೇಂದ್ರ ಕೆಯುವಿ 100 ಕಾರಿನಲ್ಲಿ ಗಾಂಜಾ ಸಾಗಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಪಿ ಎ ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ಮುಡಿಪು ಕಾಯರಗೋಳಿ ಕ್ರಾಸ್ ಬಳಿ ಕಾರು ಪತ್ತೆ ಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಆರೋಪಿಯಿಂದ ಗಾಂಜಾ ಎರಡು ಮೊಬೈಲ್ ಫೋನ್ ಕಾರು ಸಹಿತ ಒಟ್ಟು 12,96,470 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ